ಕಾಸರಗೋಡಿನಲ್ಲಿ ಇನ್ನಷ್ಟು ಖಾರ ಹೆಚ್ಚಿಸಿದ ಬಿಸಿಲು: ಕಾರ್ಮಿಕರ ಕೆಲಸದ ಸಮಯದಲ್ಲಿ ಪರಿಷ್ಕರಣೆ

ಹೊಸ ದಿಗಂತ, ಮಂಗಳೂರು:

ಬಿಸಿಲಿನ ಝಳಕ್ಕೆ ಕಾದು ಕೆಂಡವಾಗಿರುವ ಕಾಸರಗೋಡು ಜಿಲ್ಲೆಯಲ್ಲಿ ಸೂರ್ಯಾಘಾತದ ಅಪಾಯ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಕಾರ್ಮಿಕರ ಕೆಲಸದ ಅವಧಿಯಲ್ಲಿ ಕಾರ್ಮಿಕ ಆಯುಕ್ತರು ಮತ್ತೆ ಬದಲಾವಣೆ ಮಾಡಿ ಹೊಸ ಆದೇಶ ಹೊರಡಿಸಿದ್ದಾರೆ.

ಬಿಸಿಲಿಗೆ ಮೈಯೊಡ್ಡಿ ಕೆಲಸ ಮಾಡುವ ಕಾರ್ಮಿಕರಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯ ತನಕದ ಅವಧಿಯನ್ನು8 ಗಂಟೆಗಳ ಕೆಲಸದ ಅವಧಿ ಎಂದು ನಿಗದಿಪಡಿಸಲಾಗಿದ್ದು, ಇದರಲ್ಲಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ವಿಶ್ರಾಂತಿ ಸಮಯ ಎಂದು ಸೂಚಿಸಲಾಗಿದೆ.

ಇನ್ನು ಪಾಳಿ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬೆಳಗ್ಗಿನ ಪಾಳಿ ಮಧ್ಯಾಹ್ನ 12 ಗಂಟೆಗೆ ಕೊನೆಗೊಳ್ಳಬೇಕು. ಮಧ್ಯಾಹ್ನದ ಪಾಳಿ 3 ಗಂಟೆಗೆ ಪ್ರಾರಂಭವಾಗಬೇಕು. ಈ ಪರಿಷ್ಕೃತ ವೇಳಾಪಟ್ಟಿ ಮೇ 15 ರ ವರೆಗೆ ಅನ್ವಸಲಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!