ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕಪೂರ್ ಕುಟುಂಬದ ಅಳಿಯನಾಗಿರೋ ಸೈಫ್ ಅಲಿ ಖಾನ್, ಪತ್ನಿ ಕರೀನಾ ಕಪೂರ್ ಸೇರಿದಂತೆ ಇಡೀ ಕಪೂರ್ ಕುಟುಂಬಸ್ಥರು ಪ್ರಧಾನಿ ನಿವಾಸದಲ್ಲಿ ಭೇಟಿಯಾಗಿ, ಮಾತುಕತೆ ನಡೆಸಿದ್ದರು.
ಈ ಭೇಟಿ ವೇಳೆ ನಡೆದ ಹಲವು ವಿಚಾರಗಳ ಬಗ್ಗೆ ಸೈಫ್ ಅಲಿ ಖಾನ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪ್ರತಿ ದಿನ ಎಷ್ಟು ಗಂಟೆಗಳ ಕಾಲ ನಿದ್ರಿಸುತ್ತಾರೆ ಅಂತ ಸೈಫ್ ಅಲಿ ಖಾನ್ ಕೇಳಿದ್ರಂತೆ. ಇದಕ್ಕೆ ಮೋದಿ ಉತ್ತರವನ್ನೂ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಎಷ್ಟು ಗಂಟೆಗಳ ಕಾಲ ನಿದ್ರೆ ಮಾಡ್ತಾರೆ? ಎಷ್ಟು ಗಂಟೆ ವಿಶ್ರಾಂತಿ ತಗೋತಾರೆ? ಅನ್ನೋ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಪ್ರತಿ ದಿನ ವಿವಿಧ ಕಾರ್ಯಕ್ರಮ, ಸಂವಾದ, ಉದ್ಘಾಟನೆ ಅಂತ 24 ಗಂಟೆಯೂ ಬ್ಯುಸಿ ಇರುವ ಪ್ರಧಾನಿ ನರೇಂದ್ರ ಮೋದಿ ನಿದ್ರೆ, ವಿಶ್ರಾಂತಿ, ಪರ್ನನಲ್ ಕೆಲಸಗಳಿಗೆ ಎಷ್ಟು ಸಮಯ ಮೀಸಲಿಡ್ತಾರೆ ಅಂತ ಎಲ್ಲರಿಗೂ ಕುತೂಹಲ ಇತ್ತು.
ಇದೀಗ ಇತ್ತೀಚೆಗೆ ದೆಹಲಿಯಲ್ಲಿ ಬಾಲಿವುಡ್ ಶೋ ಮ್ಯಾನ್ ಖ್ಯಾತಿಯ ದಿವಂಗತ ರಾಜ್ ಕಪೂರ್ ಅವರ ಸ್ಮರಣಾರ್ಥ ಆಯೋಜಿಸಲಾದ ವಿಶೇಷ ಸಭೆಯಲ್ಲಿ ಪ್ರಧಾನಿ ಮೋದಿಯವರನ್ನು ಕಪೂರ್ ಫ್ಯಾಮಿಲಿ ಭೇಟಿಯಾಗಿತ್ತು. ಈ ವೇಳೆ ಹಲವು ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ಜೊತೆ ಸೈಫ್ ಅಲಿ ಖಾನ್ ಪ್ರಶ್ನಿಸಿದ್ದಾರೆ.
ಸಂಸತ್ ಅಧಿವೇಶನದ ಬ್ಯುಸಿಯಲ್ಲಿದ್ದರೂ ಅಧಿವೇಶನ ಮುಗಿಸಿ ಬಂದರು. ಆಗ ಅವರು ಸುಸ್ತಾಗುತ್ತಾರೆ ಅಂತ ನಾನು ಆಶ್ಚರ್ಯ ಪಡುತ್ತಿದ್ದೆ. ಆದರೆ ಅವರು ನಗುತ್ತಲೇ ಬಂದು ನಮ್ಮನ್ನೆಲ್ಲ ಭೇಟಿಯಾದರು ಅಂತ ಸೈಫ್ ಅಲಿ ಖಾನ್ ಹೇಳಿದ್ದಾರೆ.
ಈ ವೇಳೆ ನಾನು ಅವರಿಗೆ ಎಷ್ಟು ಗಂಟೆ ವಿಶ್ರಾಂತಿ ಪಡೆಯುತ್ತೀರಿ ಅಂತ ಕೇಳಿದೆ. ಅದಕ್ಕೆ ಅವರು ರಾತ್ರಿಯಲ್ಲಿ ಮೂರು ಗಂಟೆಗಳ ಕಾಲ ಅಂತ ಹೇಳಿದ್ದಾರಂತೆ ಅಂತ ಸೈಫ್ ಅಲಿ ಖಾನ್ ಹೇಳಿದ್ದಾರೆ. ಇದು ನನಗೆ ವಿಶೇಷ ದಿನವಾಗಿತ್ತು. ನಮ್ಮನ್ನು ನೋಡಲು ಮತ್ತು ಕುಟುಂಬಕ್ಕೆ ತುಂಬಾ ಗೌರವವನ್ನು ನೀಡಲು ಅವರ ಅಮೂಲ್ಯವಾದ ಸಮಯವನ್ನು ವಿನಿಯೋಗಿಸಿದ್ದಕ್ಕಾಗಿ ನಾವು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಅಂತ ಸೈಫ್ ಅಲಿ ಖಾನ್ ಹೇಳಿದ್ದಾರೆ.