ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಉತ್ಪಾದನೆ ಹೆಚ್ಚಿಸುವ ದೃಷ್ಟಿಯಿಂದ ಮೋದಿ ಸರ್ಕಾರವು ಉತ್ಪಾದನೆ ಆಧರಿತ ಉತ್ತೇಜನ ಯೋಜನೆಯನ್ನು(PLI) ಹೊರತಂದಿದ್ದು ಇದರ ಅಡಿಯಲ್ಲಿ ನೂರಾರು ಕಂಪನಿಗಳು ಭಾರತದಲ್ಲಿ ಲಕ್ಷಾಂತರ ಕೋಟಿ ರೂ. ಹೂಡಿಕೆ ಮಾಡುತ್ತಿವೆ. ಕಳೆದ 18 ತಿಂಗಳ ಅವಧಿಯಲ್ಲಿ ಅರ್ಥಾತ್ ಒಂದೂವರೆ ವರ್ಷದ ಅವಧಿಯಲ್ಲಿ 14 ಉತ್ಪಾದನೆ ಆಧರಿತ ಉತ್ತೇಜನ ಯೋಜನೆಯ ಅಡಿಯಲ್ಲಿ ಬರೋಬ್ಬರಿ 51 ಸಾವಿರಕೋಟಿ ರೂ.ಗಳಷ್ಟು ಹೂಡಿಕೆ ಮಾಡಲಾಗಿದೆ ಎಂದು ಪೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ಹೂಡಿಕೆಯು ಕಳೆದ 4 ವರ್ಷದ ಅವಧಿಯಲ್ಲಿ 588 ಕಂಪನಿಗಳು ಮಾಡಿದ 2.73 ಟ್ರಿಲಿಯನ್ ಡಾಲರ್ ಹೂಡಿಕೆಯ ಐದನೇ ಒಂದು ಭಾಗದಷ್ಟಾಗಿದೆ ಎನ್ನಲಾಗಿದೆ. ಇಲ್ಲಿಯವರೆಗೆ, ಸರ್ಕಾರವು ಪಿಎಲ್‌ಐ ಯೋಜನೆಗಳ ಅಡಿಯಲ್ಲಿ 2,400 ಕೋಟಿ ರೂ. ಮೌಲ್ಯದ ಪ್ರೋತ್ಸಾಹವನ್ನು ಬಿಡುಗಡೆ ಮಾಡಿದೆ. ನಿಗದಿತ ಮಾರಾಟ ಮಿತಿಯನ್ನು ತಲುಪಿರುವ ಕಾರಣದಿಂದ ಮೊಬೈಲ್ ಫೋನ್‌ಗಳು ಮತ್ತು ಫಾರ್ಮಾಸ್ಯುಟಿಕಲ್ಸ್ ಕಂಪನಿಗಳಿಗೆ ಯೋಜನೆಯಡಿ ತಲಾ 1,500 ಕೋಟಿ ರೂ. ಮತ್ತು 850 ಕೋಟಿ ರೂ. ಪ್ರೋತ್ಸಾಹಕವನ್ನು ಬಿಡುಗಡೆ ಮಾಡಲಾಗಿದೆ.