MUST READ| ಮೂಗಿನ ತುದಿಯಲ್ಲೇ ಸಿಟ್ಟಿರುವ ಎಲ್ಲರೂ ಇದನ್ನು ಓದಲೇಬೇಕು, ಕೋಪ ಕಡಿಮೆ ಮಾಡೋದು ಹೇಗೆ?

ಒಂದು ಸಿಟ್ಟಿನ ಕ್ಷಣ ನಿಮ್ಮ ಜೀವನವನ್ನು ಹೇಗೆಲ್ಲಾ ಬದಲಿಸಿದೆ? ‘ನೀವು ದುಡ್ಡು ಮಾಡಿದಿದ್ರೆ ಇಷ್ಟೊತ್ತಿಗೆ ನಾನು ಎಂಬಿಬಿಎಸ್ ಓದ್ತಿದೆ’ ಎಂದು ಅಪ್ಪನಿಗೆ ಹೇಳಿದ್ದು, ‘ನಿನ್ನ ತವರು ಮನೆಯವರು ಯಾವುದಕ್ಕೂ ಪ್ರಯೋಜನ ಇಲ್ಲ’ ಎಂದು ಹೆಂಡತಿಯನ್ನು ದೂರಿದ್ದು, ‘ನಿನ್ನ ಸಂಬಳ ಯಾರಿಗೂ ಸಾಲೋದಿಲ್ಲ’ ಎಂದು ಗಂಡನನ್ನು ಹೀಯಾಳಿಸಿದ್ದು, ‘ವಯಸ್ಸಾಗಿದೆ ಬುದ್ಧಿ ಇಲ್ವಾ’ ಎಂದು ಅಜ್ಜಿಯನ್ನು ನೋಯಿಸಿದ್ದು…

What is Anger? Why Do We Get Angry?ಇವೆಲ್ಲವೂ ಬೇಕಂತ ಹೇಳಿದ್ದಲ್ಲ, ಕೋಪದಲ್ಲಿ ಹೇಳಿದ್ದು ಅಷ್ಟೆ, ಒಮ್ಮೆ ಮನೆ ಬಿಟ್ಟು ಹೋಗಿದ್ದು, ಮಗಳ ಮೇಲೆ ಕೈ ಮಾಡಿದ್ದು, ಮೈದುನನನ್ನು ಥೂ ಎಂದು ಬೈದಿದ್ದು ಇವೆಲ್ಲವೂ ಬೇಕಂತ ಮಾಡಿದ್ದಲ್ಲ, ಕೋಪದಲ್ಲಿ ಮಾಡಿದ್ದು ಅಷ್ಟೆ!

What Does Angry Body Language Look Like? | BetterHelpಈಗ ಮತ್ತೆ ಹೇಳ್ತೇವೆ ಕೇಳಿ, ಒಂದು ಸಿಟ್ಟಿನ ಕ್ಷಣ ನಿಮ್ಮ ಜೀವನವನ್ನು ಹೇಗೆಲ್ಲಾ ಬದಲಿಸಿದೆ? ಸಿಟ್ಟಿನಲ್ಲಿ ತನ್ನ ಮೂಗನ್ನು ತಾನೆ ಕತ್ತರಿಸಿಕೊಂಡ ಎನ್ನುವ ಮಾತಿದೆ. ಅವರಿವರ ಕೋಪದ ಬಗ್ಗೆ ಮಾತನಾಡುತ್ತಾ ಈ ಸಾಲು ಬಳಕೆಗೆ ಬರುತ್ತದೆಯೇ ಹೊರತು ನಿಜ ಜೀವನದಲ್ಲ, ನಿಮ್ಮ ಜೀವನದಲ್ಲಿ ಈ ಮಾತಿಗೆ ಜಾಗ ಇಲ್ಲ.

Control Anger - The Hidden Anxiety Symptom‘ಸಿಟ್ಟು ಬಂದಾಗ ಏನು ಮಾಡೋಕೆ ಆಗತ್ತೆ, ಒಂದು ದಿನದ ಸಿಟ್ಟಿನಿಂದ ನಮ್ಮನ್ನು ಅಳೆಯೋಕೆ ಆಗುತ್ತದಾ? ಇಷ್ಟು ದಿನ ಪ್ರೀತಿಯಿಂದ ನೋಡಿಕೊಂಡಿದ್ದು, ಮಾತನಾಡಿದ್ದಕ್ಕೆ ಬೆಲೆ ಇಲ್ವಾ? ಒಂದೊಂದು ಬಾರಿ ಕೋಪ ಬಂದಾಗ ತಡ್ಕೋಬೇಕು, ಅಲ್ವಾ?’ ಈ ರೀತಿ ಆಲೋಚನೆ ಮಾಡುವುದೇ ಆದರೆ ಒಂದೇ ಒಂದು ಬಾರಿ ಯೋಚಿಸಿ, ‘ಅವರ ಜಾಗದಲ್ಲಿ ನೀವಿದ್ದರೆ? ನಿಮಗೂ ಯಾರಾದರೂ ಹೀಗೆ ಮಾಡಿದ್ದರೆ?’

Causes and Solutions for Feeling Hot From Anxietyಸಿಟ್ಟಿನಲ್ಲಿ ಮನೆ ಮುರಿಯುವ ಮುನ್ನ ಸಿಟ್ಟನ್ನು ಕಡಿಮೆ ಮಾಡುವತ್ತ ನಿಮ್ಮ ಸಮಯ ವ್ಯಯಿಸಿ.. ಈಗ ಇದು ಸಣ್ಣ ಸಮಸ್ಯೆಯಾಗಿರಬಹುದು ಆದರೆ ಮುಂದೊಂದು ದಿನ ಇದು ವಾಸಿಯಾಗದ ಖಾಯಿಲೆಯಾಗುತ್ತದೆ.

ಸಿಟ್ಟನ್ನು ಕಡಿಮೆ ಮಾಡುವ ವಿಧಾನಗಳಿವು..

  • ಮಾತನಾಡುವ ಮುನ್ನ ಒಂದು ಕ್ಷಣದ ದೀರ್ಘ ಉಸಿರಾಟ ಮಾಡಿ, ಯೋಚಿಸಿ. ನಿಮ್ಮ ಮನಸ್ಸಿನಲ್ಲಿ ಜೋಡಿಸಿರುವ ಸಾಲಿನಿಂದ ಎದುರಿನ ವ್ಯಕ್ತಿಗೆ ಏನಾಗುತ್ತದೆ. ಆಲೋಚಿಸಿ.
  • ಸಿಟ್ಟು ತರಿಸಿದವರಿಂದ ತುಸು ದೂರ ನಿಂತು ನಿಮ್ಮನ್ನು ನೀವು ಸಂಭಾಳಿಸಿಕೊಳ್ಳಿ. ಆನಂತರ ಅದೇನು ಹೇಳಬೇಕು ಎಂದಿದ್ದೀರೋ ಅದನ್ನು ಹೇಳಿ.
  • ಸಿಟ್ಟು ತರಿಸುವ ಒತ್ತಡವನ್ನು ತಗ್ಗಿಸೋಕೆ ವ್ಯಾಯಾಮ ಮಾಡಿ. ಇದರಿಂದ ನಿಮ್ಮ ಕೋಪ ಕಡಿಮೆಯಾಗಬಹುದು.
  • ಇಡೀ ದಿನದಲ್ಲಿ ಆಗಾಗ ನಿಮಗಾಗಿ ಒಂದೊಂದು ಬ್ರೇಕ್ ಪಡೆಯಿರಿ. ಒತ್ತಡದ ಜೀವನಶೈಲಿ ಕೂಡ ಕೋಪಕ್ಕೆ ಕಾರಣವಾಗಬಹುದು.
  • ಕೋಪದ ಬದಲು ಬೇರೆ ಏನು ಮಾಡಬಹುದು? ನಿಮ್ಮ ಮಗುವಿನ ಅಸ್ತವ್ಯಸ್ತ ಕೊಠಡಿ ಕೋಪ ತರ‍್ತಿದೆಯಾ? ರೂಮಿನ ಬಾಗಿಲು ಮುಚ್ಚಿಬಿಡಿ. ಹೆಂಡತಿ ಊಟದ ಸಮಯಕ್ಕೆ ಆಫೀಸ್‌ನಿಂದ ಬರೋದಿಲ್ವಾ? ಸಂಜೆ ಏನಾದರೂ ಸ್ನ್ಯಾಕ್ಸ್ ತಿಂದು ಅವಳ ಜೊತೆ ಲೇಟಾಗಿ ಊಟ ಮಾಡಿ. ಸಮಸ್ಯೆಗೆ ಪರಿಹಾರ ಹುಡುಕಿ.
  • ನಾನು ಎನ್ನುವ ಪದಬಳಕೆ ಮಾಡಿ, ಊಟದ ನಂತರ ಪಾತ್ರೆ ತೊಳೆಯಲು ಸಹಾಯ ಮಾಡದೇ ಹೋಗಿದ್ದಕ್ಕೆ ನನಗೆ ಕೋಪ ಬಂದಿದೆ ಎಂದು ಹೇಳಿ, ಅದನ್ನು ಬಿಟ್ಟು ನೀನು ಮನೆಕೆಲಸ ಮಾಡೋದೆ ಇಲ್ಲ ಎಂದು ಹೇಳಬೇಡಿ.
  • ಯಾರ ಮೇಲೂ ಯಾವ ರೀತಿಯ ದ್ವೇಷವನ್ನು ಇಟ್ಟುಕೊಳ್ಳಬೇಡಿ. ದ್ವೇಷದ ಬೆಂಕಿ ಮೊದಲು ಸುಡೋದು ನಿಮ್ಮನ್ನೇ.
  • ಸಿಟ್ಟನ್ನು ಕಡಿಮೆ ಮಾಡೋಕೆ ತಮಾಷೆ ಮಾಡೋದು ಕಲಿತು ಬಿಡಿ, ನಿಮ್ಮ ಕೋಪವನ್ನು ತಮಾಷೆ ಮೂಲಕ ಇನ್ನೊಬ್ಬರಿಗೆ ಹೇಳಿ ರಿಲೀಫ್ ಪಡೆಯಿರಿ.
  • ಇಷ್ಟೆಲ್ಲಾ ಆದಮೇಲೂ ಕೋಪ ಹತೋಟಿಗೆ ಬಾರದಿದ್ದರೆ ವೈದ್ಯರನ್ನು ಸಂಪರ್ಕಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!