ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸೋದು ಹೇಗೆ? ಇಲ್ಲಿದೆ ಸುಲಭ ವಿಧಾನ..

ಮಕ್ಕಳಲ್ಲಿ ಏಕಾಗ್ರತೆ ಇರುವುದು ತುಂಬಾನೇ ಮುಖ್ಯ, ದೊಡ್ಡವರಾದ ನಂತರ ಅವರ ಭವಿಷ್ಯ ಕೂಡ ಇದರ ಮೇಲೆ ನಿರ್ಭರಿತವಾಗಿರುತ್ತದೆ. ಏಕಾಗ್ರತೆಯಿದ್ದರೆ ಏನು ಬೇಕಾದರೂ ಸಾಧಿಸಬಹುದು. ಈ ಅಂಶ ವೃದ್ಧಿಗೆ ಚಿಕ್ಕವರಿಂದಲೇ ತಯಾರಿ ಮಾಡಬೇಕಿದೆ. ಏಕಾಗ್ರತೆ ಹೆಚ್ಚುಮಾಡಲು ಇಲ್ಲಿದೆ ಟಿಪ್ಸ್..

  • ಯಾವುದೇ ಟಾಸ್ಕ್ ಅಥವಾ ಕೆಲಸ ಕೊಟ್ಟಾಗ ಅದನ್ನು ವಿಭಜಿಸಿ, ಸರಳ ಮಾಡಿ ಕೊಡಿ.
  • ಪೋಷಕಾಂಶ ಇರುವ ಆಹಾರ ನೀಡುವುದು ಎಲ್ಲಕ್ಕಿಂತ ಮುಖ್ಯ
  • ಮೊಬೈಲ್, ಟಿವಿ ಬದಲು ಪುಸ್ತಕ ನೀಡಿ, ಹಳೆ ಕಾಲದವರು ಎಂದರೂ ಪರವಾಗಿಲ್ಲ, ರೇಡಿಯೋ ಕೇಳಿಸಿ. ಅವರ ಕ್ರಿಯೇಟಿವಿಟಿ ಹೆಚ್ಚಿಸಿ
  • ತಲೆ ಉಪಯೋಗಿಸುವ ಆಟಗಳಲ್ಲಿ ಮಕ್ಕಳನ್ನು ಸೇರಿಸಿಕೊಳ್ಳಿ. ಅದನ್ನು ಆಡುವ ಬಗೆ ತಿಳಿಸಿ, ಅವರಿಗೇ ಆಡಲು ಬಿಡಿ.
  • ಒಂದು ಆಟ ಅಥವಾ ಕೆಲಸ ಆದ ನಂತರ ಸ್ವಲ್ಪ ಸಮಯ ನೀಡಿ. ಒಂದರ ಹಿಂದೆ ಒಂದು ಮಾಡುವುದು ಬೇಡ. ಅವರ ಮೆದುಳು ಬೆಳವಣಿಗೆಗೆ ಅವಕಾಶ ಕೊಡಿ
  • ಮಕ್ಕಳು ಮಲಗಿದಷ್ಟು ಒಳ್ಳೆಯದು, ಸರಿಯಾದ ನಿದ್ದೆಗೆ ವ್ಯವಸ್ಥೆ ಮಾಡಿ.
  • ಹೊಟ್ಟೆಯ ಮೇಲೆ ಮಲಗಿ, ಉಸಿರಾಡುವ ಅಭ್ಯಾಸ ಮಾಡಿಸಿ.
  • ಯಾವುದಾದರೂ ವಿಷಯದ ಮೇಲೆ ಅವರು ಆಸಕ್ತಿ ತೋರಿಸಿದರೆ ಅದನ್ನು ವೃದ್ಧಿ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!