ಅಯ್ಯೋ ಪಾಪ…ನಾಯಿಮರಿಯನ್ನು ಬಟ್ಟೆ ಒಗೆದಂತೆ ಒಗೆದ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಪ್ರದೇಶದ ಆಗ್ರಾದಲ್ಲಿ ಅಮಾನುಷ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ಪುಟ್ಟ ನಾಯಿಮರಿಯನ್ನು ಹೊಡೆದು-ಬಡಿದು ಬಟ್ಟೆ ಒಗೆದಂತೆ ಒಗೆದಿದ್ದಾಳೆ. ಮಹಿಳೆಯ ರಾಕ್ಷಸತ್ವಕ್ಕೆ ಪಾಪ ಆ ಮೂಕ ಜೀವಿ ತತ್ತರಿಸಿ ಹೋಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋ ನೋಡಿದ ನಂತರ ಎಲ್ಲರೂ ಕೋಪಗೊಂಡಿದ್ದಾರೆ. ಮೂಕ ಜೀವಿ ಎಂಬ ಕನಿಷ್ಠ ಸಾಮಾನ್ಯ ಜ್ಞಾನವಿಲ್ಲದೆ, ಕರುಣೆಯಿಲ್ಲದೆ ಮಹಿಳೆ ನಾಯಿಯೊಂದಿಗೆ ವರ್ತಿಸಿದ ರೀತಿ ನೆಟ್ಟಿಗರನ್ನು ತೀವ್ರವಾಗಿ ಕೆರಳಿಸಿದೆ.

ಮೂಕಪ್ರಾಣಿಯನ್ನು ಅಮಾನವೀಯವಾಗಿ ಮತ್ತು ಅತ್ಯಂತ ಕ್ರೂರವಾಗಿ ನಡೆಸಿಕೊಂಡ ಮಹಿಳೆಯನ್ನು ಶಿಕ್ಷಿಸಬೇಕೆಂದು ಪ್ರಾಣಿ ಪ್ರಿಯರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮಹಿಳೆಯ ದಾಳಿಯಿಂದ ನಾಯಿ ಮರಿ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಅದರ ಸ್ಥಿತಿ ಚಿಂತಾಜನಕವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!