ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಾಲಿ ಧನಂಜಯ್ ಅಭಿನಯದ ಗುರುದೇವ್ ಹೊಯ್ಸಳ ರಿಲೀಸ್ ಆಗಿದ್ದು, ಸಾಕಷ್ಟು ಸದ್ದು ಮಾಡ್ತಿದೆ.
ಈ ಬೆನ್ನಲ್ಲೇ ಡಾಲಿಗೆ ವಿಶೇಷ ಉಡುಗೊರೆಯೊಂದು ಸಿಕ್ಕಿದೆ. ಈ ಉಡುಗೊರೆ ಭಾರೀ ದುಬಾರಿಯಾಗಿದೆ. ಈ ಬಗ್ಗೆ ಡಾಲಿ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.
ನನ್ನ 25ನೇ ಸಿನಿಮಾ, ಸ್ಪೆಷಲ್ ಜನರಿಂದ ಸ್ಪೆಷಲ್ ಗಿಫ್ಟ್‌ಒಂದು ಸಿಕ್ಕಿದೆ. ನನ್ನ ನಿರ್ಮಾಪಕರು ನನಗೆ ದುಬಾರಿ ಬೆಲೆಯ ಕಾರ್ ಒಂದನ್ನು ಗಿಫ್ಟ್ ಮಾಡಿದ್ದಾರೆ. ಸಿನಿಮಾ ಗೆಲ್ಲೋದಕ್ಕೆ ಅಭಿಮಾನಿಗಳು ಕಾರಣ, ಸಿನಿಮಾ ಗೆದ್ದ ಕಾರಣ ನನಗೆ ಕೋಟಿ ಬೆಲೆ ಬಾಳುವ ಕಾರ್ ಸಿಕ್ಕಿದೆ. ಒಳ್ಳೆಯ ನೆನಪುಗಳನ್ನು ಕೊಟ್ಟ ತಂಡಕ್ಕೆ ಧನ್ಯವಾದಗಳು ಎಂದಿದ್ದಾರೆ.
25th film and a special gift from my special people. Love you and cheers for more and more things we are going to do together. Thanks for such good memories❤️
ನನ್ನ ನಿರ್ಮಾಪಕರ ಮತ್ತು ಅಭಿಮಾನಿಗಳ ಕೊಡುಗೆ🤗#GurudevHoysala @Karthik1423 @yogigraj pic.twitter.com/7TUXXNi1gV
— Gurudev Hoysala (@Dhananjayaka) March 31, 2023