ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿವುಡ್ ನಟ ರಾಬರ್ಟ್ ಡೌನಿ ಜೂನಿಯರ್ ತಿಂದು ಎಸೆದ ಚೂಯಿಂಗ್ ಗಮ್ ಹರಾಜಿಗಿದೆ!
ವ್ಯಕ್ತಿಯೊಬ್ಬರು ರಾಬರ್ಟ್ ಎಸೆದ ಚೂಯಿಂಗ್ ಗಮ್ನ್ನು ತೆಗೆದುಕೊಂಡು ಹೋಗಿದ್ದು, ಹರಾಜಿಗಿಟ್ಟಿದ್ದಾರೆ.
ಹಾಲಿವುಡ್ ವಾಕ್ ಆಫ್ ಫೇಮ್ನಲ್ಲಿ ಐರನ್ ಮ್ಯಾನ್ ನಿರ್ದೇಶಕ ಜಾನ್ ಫಾವ್ರೊ ಅವರಿಗೆ ಅವಾರ್ಡ್ ನೀಡಿ, ತಮಾಷೆಗಾಗಿ ತಮ್ಮ ಬಾಯಲ್ಲಿದ್ದ ಚೂಯಿಂಗ್ ಗಮ್ನ್ನು ಅವಾರ್ಡ್ ಮೇಲೆ ಇರಿಸಿದ್ದರು. ಅಲ್ಲೆ ಚೂಯಿಂಗ್ ಗಮ್ ಬಿದ್ದಿದ್ದನ್ನು ವ್ಯಕ್ತಿ ತೆಗೆದುಕೊಂಡು ಹರಾಜಿಗೆ ಇಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೆ, ಚೋಯಿಂಗ್ ಗಮ್ ಅವರದ್ದೇ, ನಂಬಿಕೆ ಇಲ್ಲವಾದರೆ ಡಿಎನ್ಎ ಪರೀಕ್ಷೆ ಮಾಡಿ ಖಚಿತಪಡಿಸಿಕೊಳ್ಳಿ ಎಂದು ಹೇಳಿದ್ದಾರೆ. $40,000 (32 ಲಕ್ಷ) ರಿಂದ ಹರಾಜು ಆರಂಭವಾಗಲಿದೆ.