ಹುಬ್ಬಳ್ಳಿ: ಫೆ.2 ರಂದು ಪುಸ್ತಕ ಬಿಡುಗಡೆ ಸಮಾರಂಭ

ದಿಗಂತ ವರದಿ ಹುಬ್ಬಳ್ಳಿ:

ನಗರದ ಶ್ರೀ ಶರಣ ಮಡಿವಾಳಪ್ಪ ಹೂಲಿ ಚಾರಿಟೇಬಲ್ ಟ್ರಸ್ಟ್ ಹಾಗೂ ಹೂಲಿ ಪ್ರಕಾಶನದ‌ ಸಹಯೋಗದಲ್ಲಿ ದಿ.ಶ್ರೀ ಹುಚ್ಚೇಶ್ವರ ಮೇದಿ ಅವರ ಪರಿಕ್ಷಿತ ಹೂಲಿ ಮಡಿವಾಳಪ್ಪನವರ ಚರಿತ್ರೆ ಮತ್ತು ವೀರಣ್ಣ ಹೂಲಿ ಅವರ ಹೂದೊಟದ ಬೆಳದಿಂಗಳು ಪುಸ್ತಕ ಬಿಡುಗಡೆ ಸಮಾರಂಭ ಫೆ.2 ರಂದು ಸಂಜೆ 4 ಗಂಟೆಗೆ ಮೂರುಸಾವಿರಮಠ ಸಂಘದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ವೀರಣ್ಣ ಹೂಲಿ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು‌ ರುದ್ರಾಕ್ಷಿ ಮಠದ ಪರಮಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಡಾ. ಶ್ಯಾಮಸುಂದರ ಬಿದರಕುಂದಿ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜ ಆರ್. ಅಂಗಡಿ, ನವಿಲೆ ದೇವಸ್ಥಾನದ ಜಿಣೋದ್ಧಾರ ಸಮಿತಿಯ ಅಧ್ಯಕ್ಷರು ಮತ್ತು ಲೆಕ್ಕ ಪರಿಶೋಧಕರಾದ ಸುರೇಶ ಚೆನ್ನಿ, ಬಣಗಾರ ಸಮಾಜದ ಅಧ್ಯಕ್ಷ ಅನಿಲ ಕವಿಶೆಟ್ಟಿ, ಉತ್ತರ ಕರ್ನಾಟಕ ಜ್ಯುವೇಲರ್ ಸಂಘಗಳ ಮಹಾಸಭಾದ ಅಧ್ಯಕ್ಷರಾದ ಗೋವಿಂದ ನಿರಂಜನ ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷ ಷಣ್ಮುಖ ಎಂ. ಹೂಲಿ ವಹಿಸಿಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಮಹಾನೀಯರನ್ನು ಸನ್ಮಾನಿಸಲಾಗುವುದು. ಅಲ್ಲದೇ ಸಾಹಿತಿಗಳಾದ ಮಹಾಂತಪ್ಪ ನಂದೂರ ಮತ್ತು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಪ್ರೋ. ಕೆ. ಎಸ್. ಕೌಜಲಗಿ ಗ್ರಂಥಗಳ ವಿಮರ್ಶೆ ಮಾಡಲಿದ್ದಾರೆ ಎಂದು ತಿಳಿಸಿದರು.
ನಿವೃತ್ತ ಗ್ರಂಥಪಾಲಕ ಡಾ. ಬಿ. ಎಸ್. ಮಾಳವಾಡ, ಬಸವರಾಜ ಹೂಲಿ, ಮಹೇಶ ಹೂಲಿ, ಪ್ರವೀಣ ಹೂಲಿ, ಭಾಗ್ಯ ಶ್ರೀ ಹೂಲಿ, ಬಸವರಾಜ ಹೂಲಿ, ವೀರಭದ್ರಪ್ಪ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!