ಸಾತೊಡ್ಡಿ ಜಲಪಾತದಲ್ಲಿ ಮುಳುಗಿ ಹುಬ್ಬಳ್ಳಿ ವ್ಯಕ್ತಿ ಸಾವು

ಹೊಸದಿಗಂತ ವರದಿ, ಯಲ್ಲಾಪುರ:

ತಾಲ್ಲೂಕಿನ ಸಾತೊಡ್ಡಿ ಜಲಪಾತಕ್ಕೆ ಭಾನುವಾರ ಪ್ರವಾಸಕ್ಕೆಂದು ಬಂದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹುಬ್ಬಳ್ಳಿಯ 50 ವಯಸ್ಸಿನ ಪೋತುಲ್ ರಾಮನೇಂದ್ರ ರಾವ್ . ಇವರ ಮೃತದೇಹವು ಸೋಮವಾರ ಪತ್ತೆಯಾಗಿದೆ.

ಇವರು ಪತ್ನಿ ಹಾಗೂ ಇಬ್ಬರು ಮಕ್ಕಳು, ತಂಗಿ ಮತ್ತು ಸ್ನೇಹಿತರೊಂದಿಗೆ ಜಲಪಾತಕ್ಕೆ ಪ್ರವಾಸ ಬಂದಿದ್ದರು. ಆಂಧ್ರಪ್ರದೇಶದ ಮೂಲದವರಾದ ಇವರು ಹುಬ್ಬಳ್ಳಿಯಲ್ಲಿ ರೈಲ್ವೇ ಕಾಮಗಾರಿ ಗುತ್ತಿಗೆದಾರರಾಗಿದ್ದರು ಎಂದು ತಿಳಿದು ಬಂದಿದೆ .
ತಮ್ಮ ಮಗನೊಂದಿಗೆ ನೀರಿಗಿಳಿದಿದ್ದ ಇವರನ್ನು ನೀರಿನಲ್ಲಿ ಆಕಸ್ಮಿಕ ವಾಗಿ ಮುಳುಗಿದರು. ರಕ್ಷಿಸಲು ಸ್ಥಳೀಯರು, ಉಳಿದ ಪ್ರವಾಸಿಗರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮಗನು ಬದುಕುಳಿದಿದ್ದು ಅಪಾಯದಿಂದ ಪಾ ರಾಗಿದ್ದಾನೆ

ವಿಷಯ ತಿಳಿದ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ನಾರಾಯಣ ಭಟ್ಟ ಕಂಚನಳ್ಳಿ, ಸಮಿತಿಯ ಸದಸ್ಯರಾದ ಶ್ರೀಪತಿ ಮೆಣಸುಮನೆ, ಶಶಿಧರ ಕೋಟೆಮನೆ, ರಾಘವೇಂದ್ರ ಮೆಣಸುಮನೆ, ಯಶವಂತ ಪಟಗಾರ, ಡಿ.ಆರ್.ಎಫ್.ಒ ಶಿವಾನಂದ, ಕಾವಲುಗಾರ ಸಂಗಮೇಶ ಹಾಗೂ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿಯೊಂದಿಗೆ ರಾತ್ರಿ 11 ಗಂಟೆಯವರೆಗೆ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿರ್ಲಿಲ್ಲ .
ಇಂದು ಬೆಳಿಗ್ಗೆ ಶೋಧ ಕಾರ್ಯ ತೀವ್ರಗೊಳಿಸಿದಾಗ, 10.30 ಗಂಟೆಯ ಸುಮಾರಿಗೆ ನೀರಿನಲ್ಲಿ ಮೃತದೇಹ ದೊರೆಯಿತು. ವಿಷಯ ತಿಳಿದ ಸಂಬಂಧಿಕರು, ಸ್ನೇಹಿತರು ನೂರಾರು ಸಂಖ್ಯೆಯಲ್ಲಿ ಸ್ಥಳದಲ್ಲಿದ್ದರು. ಯಲ್ಲಾಪುರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!