ಹುಬ್ಬಳ್ಳಿ: ರೈಲಿನಲ್ಲಿ ವ್ಯಕ್ತಿ ಕೊಲೆ

ಹುಬ್ಬಳ್ಳಿ ಹೊಸದಿಗಂತ ವರದಿ:

ನಗರದ ರೈಲ್ವೆ ನಿಲ್ದಾಣದ ರೈಲೊಂದರಲ್ಲಿ ವ್ಯಕ್ತಿ ಓರ್ವನನ್ನು ಬರ್ಬವಾಗಿ ಹತ್ಯೆ ಮಾಡಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಗುಂಟಕಲ್ ನಿಂದ ಹುಬ್ಬಳ್ಳಿಗೆ ಬರುವ ರೈಲಿನಲ್ಲಿ (07388) ಸುಮಾರು 40-50 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ. ಹತ್ಯೆಯಾದ ವ್ಯಕ್ತಿಯ ಗುರುತು ತಿಳಿದುಬಂದಿಲ್ಲ. ರೈಲ್ವೆ ಬೋಗಿಯಲ್ಲಿ ವ್ಯಕ್ತಿಯ ಶವದ ಸುತ್ತಮುತ್ತ ರಕ್ತ ಹರಿದಿದೆ. ಕೊಲೆಯಾದ ಸ್ಥಳಕ್ಕೆ ಹುಬ್ಬಳ್ಳಿ ರೈಲ್ವೆ ಪೊಲೀಸರು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!