ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹುಬ್ಬಳ್ಳಿಯ ಕೃಪಾ ಜೈನ್ ಪಾಸ್

ಹೊಸದಿಗಂತ ವರದಿ, ಹುಬ್ಬಳ್ಳಿ:

ನಗರದ ವ್ಯಾಪಾರಿ ಅಭಯ ಪಾರ್ಲೆಚಾ ಹಾಗೂ ಇಂದಿರಾ ಪಾರ್ಲೆಚಾ ಅವರ ಸುಪುತ್ರಿ ಕೃಪಾ ಜೈನ್ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗ ಮಂಗಳವಾರ ಫಲಿತಾಂಶ ಪ್ರಕಟಿಸಿದೆ. ಕೃಪಾ ಜೈನ್ ಅಖಿಲ ಭಾರತ ಮಟ್ಟದಲ್ಲಿ ೪೪೦ನೇ ರ‍್ಯಾಂಕ್ ಪಡೆದಿದ್ದಾರೆ.

ಕೃಪಾ ಜೈನ್ ಅವರು ಎರಡು ಬಾರಿ ಯುಪಿಎಸ್‌ಸಿ ಪರೀಕ್ಷೆ ಎದುರಿಸಿದ್ದರೂ ತೇರ್ಗಡೆಯಾಗಿರಲಿಲ್ಲ. ಈಗ ಮೂರನೇ ಪ್ರಯತ್ನದಲ್ಲಿ ತೇರ್ಗಡೆ ಆಗಿದ್ದಾರೆ. ಕೃಪಾ ಜೈನ್ ಅವರು ಯಾವುದೇ ತರಬೇತಿ ಪಡೆಯದೆ ಸ್ವಯಂ ಪ್ರೇರಿತವಾಗಿ ಅಧ್ಯಯನ ಮಾಡಿದ್ದಾರೆ.

ಪ್ರಾಥಮಿಕ ಶಿಕ್ಷಣವನ್ನು ನಗರದ ಡಿ.ಕೆ. ಪಬ್ಲಿಕ್ ಶಾಲೆಯಲ್ಲಿ ಓದಿದ್ದಾರೆ. ಪಿಯುಸಿ ವಿದ್ಯಾನಗರ ಕೆಎಲ್‌ಇ ಸಂಸ್ಥೆಯ ಪ್ರೇರಣಾ ಪಿಯು ವಿಜ್ಞಾನ ಕಾಲೇಜು ಹಾಗೂ ಸಾಫ್ಟವೇರ್ ಎಂಜಿನಿಯರಿಂಗ್ ಪದವಿಯನ್ನು ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಪಡೆದಿದ್ದಾರೆ.

ಸ್ವಯಂ ಪ್ರೇರಿತ ಅಧ್ಯಯನ ಮಾಡಿ ಮಗಳು ಕೃಪಾ ಯುಪಿಎಸ್‌ಸಿ ತೇರ್ಗಡೆಯಾಗಿದ್ದಾಳೆ. ಅವಳ ಕಠಿಣ ಪರಿಶ್ರಮವೇ ಈ ಸಾಧನೆ ಮಾಡಲು ಕಾರಣವಾಗಿದೆ ಎಂದು ತಾಯಿ ಇಂದಿರಾ ಪಾರ್ಲೆಚಾ ತಿಳಿಸಿದರು.

ಕಠಿಣ ಪರಿಶ್ರಮ ಹಾಗೂ ತಾಳ್ಮೆ ಬಹಳ ಅವಶ್ಯಕವಾಗಿದೆ. ನಾನು ಮೊದಲ ಎರಡು ಬಾರಿ ಪ್ರಯತ್ನದಲ್ಲಿ ವಿಫಲವಾದರೂ ಧೃತಿಗೆಡಲಿಲ್ಲ. ಮತ್ತೆ ಪ್ರಯತ್ನ ಮಾಡಿದೆ ಫಲ ದೊರೆಯಿತು. ಯುಪಿಎಸ್‌ಸಿಗೆ ಸಂಬಂಸಿದ ಸೀಮಿತ ಪುಸ್ತಕಗಳ ಓದಿ ಅರ್ಥ ಮಾಡಿಕೊಳ್ಳುತ್ತಿದ್ದೆ. ನಿತ್ಯ ಪತ್ರಿಕೆಗಳು ಓದುತ್ತಿದೆ. ತಂದೆ ತಾಯಿ ಸಹಕಾರ ನೀಡಿದ್ದಾರೆ. ನಾವು ಇಡುವ ಗುರಿಯ ಮೇಲೆ ಅಚಲ ನಂಬಿಕೆ ಇರಬೇಕು. ಅಂದಾಗ ಏನು ಬೇಕಾದರೂ ಸಾಸಬಹುದು ಎಂದು ಯುಪಿಎಸ್‌ಸಿ ತೇರ್ಗೆಡೆಯಾದ ಅಭ್ಯರ್ಥಿ ಕೃಪಾ ಜೈನ್ ಹೊಸದಿಗಂತಕ್ಕೆ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!