ಹೆಚ್.ಡಿ.ಕೋಟೆಯಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಹೊಸದಿಗಂತ ವರದಿ, ಮೈಸೂರು

ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಮೈಸೂರು-ಮಾನಂದವಾಡಿ ಮುಖ್ಯರಸ್ತೆಯಲ್ಲಿ ಮಂಗಳವಾರ ನಡೆದಿದೆ.

ಹಂಪಾಪುರ ಹೋಬಳಿಯ ವಡ್ಡರ ಪಾಳ್ಯ ಗ್ರಾಮದ ನಿವಾಸಿ ತಿಮ್ಮಭೋವಿ ( ೪೯)ಮೃತಪಟ್ಟ ದುರ್ದೈವಿ. ಇವರು ಬೆಳಗ್ಗೆ ೬.೩೦ರ ವೇಳೆಯಲ್ಲಿ ವಡ್ಡ ವರ್ಷದ ವ್ಯಕ್ತಿ ಇಂದು ಆನೆಯ ತುಳಿತಕ್ಕೆ ಪ್ರಾಣವನ್ನು ಕಳೆದುಕೊಂಡಿದ್ದಾರೆ .

ಬೆಳಿಗ್ಗೆ ೬.೩೦ ಗಂಟೆಯಲ್ಲಿ ವಡ್ಡರಪಾಳ್ಯದಿಂದ ಹೊಮ್ಮರಗಳ್ಳಿ ಗ್ರಾಮಕ್ಕೆ ಮೈಸೂರು-ಮಾನಂದವಾಡಿ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಠಾತ್ತನೆ ಎದುರಾದ ಕಾಡಾನೆಯೊಂದು ದಾಳಿ ನಡೆಸಿ, ತುಳಿದು ಸಾಯಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!