ಅಕ್ರಮ ಹಸು ಮಾಂಸ ಮಾರಾಟ ಅಡ್ಡೆಗೆ ಪೊಲೀಸರ ದಾಳಿ: ಐವರ ಬಂಧನ

ಹೊಸದಿಗಂತ ವರದಿ,ರಾಯಚೂರು

ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ಅಕ್ರಮವಾಗಿ ಹಸು ಮಾಂಸ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರ ದಾಳಿ ಐವರ ಬಂಧನ ಮತ್ತು ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.

ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದ ಕಾಕಾನಗರದಲ್ಲಿ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ೫೨ ಕೆಜಿ ಹಸು ಮಾಂಸವಲ್ಲದೆ ಕೊಂದು ಹಾಕಲಾಗಿದ್ದ ಎರಡು ಹಸುಗಳ ಮಾಂಸ ಮಾರಾಟಕ್ಕೆ ಯತ್ನ ಮಾಡಿರುವುದು ಕಂಡುಬoದಿದೆ.

ಹಟ್ಟಿ ಪೊಲೀಸ್ ಇನ್ಸ್ ಪೆಕ್ಟರ್ ಹೊಸಕೇರಪ್ಪ ನೇತೃತ್ವದಲ್ಲಿ ಈ ದಾಳಿಯನ್ನು ಮಾಡಲಾಗಿದದು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!