ಸಮಂತಾ‌ ಹೊಸ ವೆಬ್‌ ಸಿರೀಸ್‌: ʼಗೂಢಾಚಾರಿಣಿ‌ʼ ಲುಕ್‌ನಲ್ಲಿ ಸ್ಯಾಮ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ “ದಿ ಫ್ಯಾಮಿಲಿ ಮ್ಯಾನ್ ಸೀಸನ್-2” ಮೂಲಕ ಬಾಲಿವುಡ್‌ನಲ್ಲಿ ಸಂಪೂರ್ಣ ಜನಪ್ರಿಯತೆ ಗಳಿಸಿದ ಸಮಂತಾ ಆ ಕ್ರೇಜ್ ಅನ್ನು ಮುಂದುವರಿಸಲು ಮತ್ತೆರಡು ಹಿಂದಿ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲಿ ಬಾಲಿವುಡ್ ಸ್ಟಾರ್ ವರುಣ್ ಧವನ್ ಜೊತೆಗಿನ ವೆಬ್ ಸೀರೀಸ್ ಕೂಡ ಒಂದು.

ಇದು ಹಾಲಿವುಡ್ ನಿರ್ದೇಶಕರ ‘ರುಸ್ಸೋ ಬ್ರದರ್ಸ್’ ಅಮೇರಿಕನ್ ಶೋ “ಸಿಟಾಡೆಲ್” ನ ಅಧಿಕೃತ ರಿಮೇಕ್ ಆಗಿದೆ. ಅಮೆಜಾನ್ ಪ್ರೈಮ್ ವಿಡಿಯೋಸ್ ಒರಿಜಿನಲ್ ಸೀರೀಸ್ ಆಗಿ ತಯಾರಾಗುತ್ತಿರುವ ಈ ‘ಸಿಟಾಡೆಲ್’ ಇಂಗ್ಲಿಷ್ ಅವತರಣಿಕೆಯಲ್ಲಿ ಬಾಲಿವುಡ್ ನಾಯಕಿ ಪ್ರಿಯಾಂಕಾ ಚೋಪ್ರಾ ನಿರ್ವಹಿಸಿದ್ದ ಪಾತ್ರವನ್ನು ಹಿಂದಿ ಅವತರಣಿಕೆಯಲ್ಲಿ ಸಮಂತಾ ಮಾಡಲಿದ್ದಾರೆ. ಈ ಪಾತ್ರದಲ್ಲಿ ಸ್ಯಾಮ್ ʻರಾ ಏಜೆಂಟ್ʼ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಸಮಂತಾ ಮತ್ತು ವರುಣ್ ಧವನ್ ಇಬ್ಬರೂ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಬಿ-ಟೌನ್‌ನಲ್ಲಿ ಚರ್ಚೆ ನಡೆಯುತ್ತಿದೆ. ಪ್ರಸ್ತುತ ಸಮಂತಾ, ವಿಜಯ್ ದೇವರಕೊಂಡ ಜೊತೆಗೆ ಖುಷಿ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ನವೆಂಬರ್ ವೇಳೆಗೆ ಪೂರ್ಣಗೊಳ್ಳಲಿದ್ದು, ನವೆಂಬರ್ ಅಂತ್ಯಕ್ಕೆ ಸಿಟಾಡೆಲ್ ರಿಮೇಕ್ ಸೆಟ್‌ನಲ್ಲಿ ಸ್ಯಾಮ್‌ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿನಿ ವಲಯಗಳಲ್ಲಿ ಮಾತು ಕೇಳಿಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!