ಉರುಳಿ ಬಿದ್ದ ಬೃಹತ್ ಮರ: ಹತ್ತಾರು ಬೈಕ್‌ಗಳು ಜಖಂ

ಹೊಸದಿಗಂತ ವರದಿ, ವಿಜಯಪುರ :

ನಗರದಲ್ಲಿ ಭಾರಿ ಗಾಳಿಗೆ ಬೃಹತ್ ಮರ ಉರುಳಿ ಹತ್ತಾರು ಬೈಕ್‌ಗಳು ಜಖಂ ಆಗಿರುವ ಘಟನೆ ಇಲ್ಲಿನ ಮೀನಾಕ್ಷಿ ಚೌಕ್ ಬಳಿ ಶನಿವಾರ ನಡೆದಿದೆ.

ನಗರದಲ್ಲಿ ಬೆಳಗ್ಗೆಯಿಂದ ಬೀಸುತ್ತಿರುವ ಗಾಳಿಗೆ ಈ ಮರ ಬಿದ್ದಿದ್ದು, ಜಖಂಗೊಂಡ ಬೈಕ್ ಮಾಲೀಕರು ಸಂಕಟಪಡುವಂತಾಗಿದೆ. ಮರದಡಿ ಸಿಲುಕಿದ ಬೈಕ್ ಹೊರ ತೆಗೆಯಲು ಹಲವು ಗಂಟೆಗಳ ಕಾಲ ಪ್ರಯಾಸ ಪಡುವಂತಾಯಿತು.

ನಗರದ ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!