ಗ್ರಾಹಕರ ಜೇಬಿಗೆ ಬಿತ್ತು ಮತ್ತೆ ಕತ್ತರಿ: ಅಮುಲ್ ಹಾಲಿನ ದರದಲ್ಲಿ ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮುಲ್ ಬ್ರ್ಯಾಂಡ್ ಅಡಿಯಲ್ಲಿ ಹಾಲು ಹಾಗೂ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಸಂಪೂರ್ಣ ಕೆನೆಭರಿತ ಹಾಲು ಹಾಗೂ ಎಮ್ಮೆ ಹಾಲಿನ ದರವನ್ನು ಲೀಟರ್ ಗೆ 2ರೂ. ಏರಿಕೆ ಮಾಡಿದೆ. ಈ ದರ ದೇಶದಎಲ್ಲ ರಾಜ್ಯಗಳಿಗೂ ಅನ್ವಯಿಸಲಿದೆ.
ಆಗಸ್ಟ್ ಹಾಗೂ ಮಾರ್ಚ್ ನಲ್ಲಿ ಕೂಡ ಅಮುಲ್ ಬೆಲೆಯೇರಿಕೆ ಮಾಡಿತ್ತು. ಇದೀಗ ಮೂರನೇ ಬಾರಿ ದರ ಹೆಚ್ಚಳವಾಗಿದೆ.
ಬೆಲೆ ಹೆಚ್ಚಳದ ಪರಿಣಾಮ ಸಂಪೂರ್ಣ ಕೆನೆಭರಿತ ಹಾಲಿನ ಬೆಲೆ ಪ್ರತಿ ಲೀಟರ್ ಗೆ 61ರೂ.ನಿಂದ 63ರೂ.ಗೆ ಏರಿಕೆಯಾಗಿದೆ.
ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ತನ್ನ ಗ್ರಾಹಕರಿಂದ ಪಡೆದ ಪ್ರತಿ 1 ರೂಪಾಯಿಯಲ್ಲಿ ಅಂದಾಜು 80 ಪೈಸೆಯನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತದೆ. ಹೀಗಾಗಿ ಹಾಲಿನ ದರ ಹೆಚ್ಚಳ ಹಾಲು ಉತ್ಪಾದಕರಿಗೆ ಉತ್ತಮ ಹಾಲಿನ ದರ ನೀಡಲು ನೆರವು ನೀಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!