ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆಗೆ ಅಭೂತ ಪೂರ್ವ ಬೆಂಬಲ: ಸಿದ್ದರಾಮಯ್ಯ

ಹೊಸದಿಗಂತ ವರದಿ,ಬಳ್ಳಾರಿ:

ಎಐಸಿಸಿ ಯುವ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಡೆಯುತ್ತಿರುವ ಪಾದಯಾತ್ರೆಗೆ ರಾಜ್ಯದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಪಾದಯಾತ್ರೆ ಹಿನ್ನೆಲೆ ರಾಜ್ಯದಲ್ಲಿ ಬಳ್ಳಾರಿಯಲ್ಲಿ ಸಾರ್ವಜನಿಕ ಬಹಿರಂಗ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಿಳಿಸಿದರು.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದರು. ರಾಹುಲ್ ಗಾಂಧಿ ಅವರು, ಸೆ.7ರಂದು ಪಾದಯಾತ್ರೆ ಶುರುಮಾಡಿದ್ದು, ತೆಲಂಗಾಣ, ಕೇರಳ ಮೂಲಕ ನಮ್ಮ ರಾಜ್ಯ ಪ್ರವೇಶಿಸಿದೆ, 3570 ಕಿ.ಮೀ.ಪಾದಯಾತ್ರೆ ಇದಾಗಿದ್ದು, ಇದು ಸುಲಭದ ಮಾತಲ್ಲ, 12 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶ ಸೇರಿ ಒಟ್ಟು 14 ರಾಜ್ಯಗಳಲ್ಲಿ ಯಾತ್ರೆ ಸಂಚರಿಸಲಿದೆ, ರಾಜ್ಯಕ್ಕೆ ಸೆ. 30ರಂದು ಪ್ರವೇಶಿಸಿದೆ, 24 ದಿನಗಳ ಕಾಲ 510 ಕಿ.ಮೀ.ಉದ್ದ ಪಾದಯಾತ್ರೆ ರಾಜ್ಯದಲ್ಲಿ ನಡೆಯಲಿದೆ ಎಂದರು. ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ, ಇಡಿ, ಸಿಬಿಐ, ಐಟಿ ಸಂಸ್ಥೆಗಳು ಸರ್ಕಾರದ ಕೈಗೊಂಬೆಯಾಗಿವೆ, ದೇಶದಲ್ಲಿ ಜಾತಿ ಜಾತಿ ಮಧ್ಯೆ ಕಲಹಗಳು ಶುರುವಾಗಿವೆ, ಅಶಾಂತಿ ವಾತಾವರಣ ಸೃಷ್ಟಿಯಾಗಿದೆ ಎಲ್ಲವನ್ನೂ ಜನರಿಗೆ ತಿಳಿಸಲು ಉದ್ದೇಶ ನಮ್ಮದು, ಇದನ್ನು ರಾಜಕೀಯಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ, ಎಐಸಿಸಿ ಕೋರ್ ಕಮಿಟಿ ಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ನಡೆಯುವ ಪಾದಯಾತ್ರೆ ಇದಾಗಿದೆ ಎಂದರು. ಸಿ.ಎಂ.ಬಸವರಾಜ್ ಬೊಮ್ಮಾಯಿ ನಮ್ಮಿಂದ ಹೋದ ಗಿರಾಕಿ ಆರ್ ಎಸ್ ಎಸ್ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ, ದೇಶ ಒಡೆದಿದ್ದೇ ಕಾಂಗ್ರೆಸ್ ಎಂದು ಪತ್ರಿಕೆ ಮುಖಪುಟದಲ್ಲಿ ಜಾಹಿರಾತು ಪ್ರಕಟಿಸಿದ್ದಾರೆ, ನಾಚಿಕೆಯಾಗಬೇಕು ಬಿಜೆಪಿ ಅವರಿಗೆ, ಎಸ್ಸಿ ಹಾಗೂ ಎಸ್ಟಿ ಅವರಿಗೆ ಮೀಸಲಾತಿ ಹೆಚ್ಚಳ ಮಾಡುವ ಕುರಿತು ನಮ್ಮ ಅವಧಿಯಲ್ಲಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಸಮೀತಿ ರಚನೆ ಮಾಡಲಾಗಿತ್ತು, ಅದನ್ನು ನಾವೇ ಮಾಡಿದ್ದು, ಬಿಜೆಪಿ ಅವರು ಪ್ರಚಾರ ಪಡಿತಿದಾರೆ, ಬಿಜೆಪಿ ಅವರು ನಾವು ರಾಷ್ಟ್ರಭಕ್ತರು ಅಂತಾರೇ, ಆರ್ ಎಸ್ ಎಸ್ ನಲ್ಲಿ ಯಾವ ಒಬ್ಬರು ದೇಶಕ್ಕಾಗಿ ತ್ಯಾಗ ಮಾಡಿಲ್ಲ, ಈ ಕುರಿತು ತಾಕತ್ತಿದ್ದರೆ ಚೆರ್ಚೆಗೆ ಬನ್ನಿ ಎಂದು ಸವಾಲೆಸೆದರು. ಶೇ.40 ಬಿಜೆಪಿ ಸರ್ಕಾರ ಅಂದು ನಾವು ಹೇಳಿಲ್ಲ, ಗುತ್ತಿಗೆದಾರರು ನೇರವಾಗಿ ಪ್ರಧಾನಿಗೆ ಪತ್ರ ಬರೆದಿದ್ದಾರೆ, ಇದನ್ನು ವಿರೋಧಿಸಿದರೇ ದಾಖಲೆ ಕೊಡಿ ಅಂತಾರೆ, ನಮ್ಮ ಸರ್ಕಾರವನ್ನು ಮೋದಿಜೀ ಅವರು ಶೇ.10 ಸರ್ಕಾರ ಎಂದು ನಮ್ಮನ್ನು ಕರೆದಿದ್ದರು, ನಾವು ಆವಾಗ ದಾಖಲೆಗಳನ್ನು ಕೇಳಿದ್ವಾ, ಇಂತಹ ಬ್ರಷ್ಟ, ಕೆಟ್ಟ ಸರ್ಕಾರವನ್ನು ಎಂದೂ ನೋಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಬಿ.ಕರ.ಹರಿ ಪ್ರಸಾದ್, ಆರ್.ಮಂಜುನಾಥ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಎಐಸಿಸಿ ಕಾರ್ಯದರ್ಶಿ ಶ್ರೀಧರ್ ಬಾಬು, ಪ್ರಚಾರ ಸಮೀತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಮಾಜಿ ಸಚಿವ ಸಂತೋಷ್ ಲಾಡ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಎಮ್ಮೆಲ್ಸಿ ಅಲ್ಲಂ ವೀರಭದ್ರಪ್ಪ, ಮಾಜಿ ಸಚಿವ ಎಂ.ದಿವಾಕರ್ ಬಾಬು, ಡಿಸಿಸಿ ಅಧ್ಯಕ್ಷ ಮಹ್ಮದ್ ರಫೀಕ್, ಡಾ.ಎಲ್.ಹನುಮಂತಯ್ಯ, ಜಿ.ಪಂ.ಮಾಜಿ ಸದಸ್ಯ ನಾರಾ ಭರತ್ ರೆಡ್ಡಿ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಜೆ.ಎಸ್.ಆಂಜಿನೇಯಲು, ರಾವೂರ್ ಸುನೀಲ್, ಶಾಸಕರಾದ ಈ.ತುಕಾರಾಂ, ಜೆ.ಎನ್.ಗಣೇಶ್, ಭೀಮಾ ನಾಯಕ್, ಎಮ್ಮೆಲ್ಸಿ ಜಬ್ಬಾರ್, ಮಾಜಿ ಶಾಸಕ ಬಿ.ಎಂ.ನಾಗರಾಜ್, ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ, ಮೇಯರ್ ರಾಜೇಶ್ವರಿ ಸುಬ್ಬರಾಯಡು, ಗುಜ್ಜಲ್ ರಘು, ಮುರುಳಿಕೃಷ್ಣ, ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್, ಅಬ್ದುಲ್ ವಹಾಬ್, ಸಿರಾಜ್ ಶೇಖ್ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!