August 6, 2026
Thursday, August 6, 2026
spot_img

ತಿರುವಿನಲ್ಲಿ ಸಿಲುಕಿ ಫಜೀತಿಪಟ್ಟ ಬೃಹತ್ ಟ್ರೇಲರ್: ಪಣಂಬೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಸುಗಟ್ಟಲೆ ತ್ರಾಸ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರು ನಗರದ ಹೊರವಲಯ ಪಣಂಬೂರು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಬೃಹತ್ ಟ್ರೇಲರ್ ತಿರುವಿನಲ್ಲಿ ಸಿಲುಕಿದ ಪರಿಣಾಮ ಭಾನುವಾರ ಸುಮಾರು ತಾಸು ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು.

ಮಂಗಳೂರು–ಉಡುಪಿ ಮಾರ್ಗದಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಪಣಂಬೂರು ತಿರುವಿನಲ್ಲಿ ಬೃಹತ್ ಯಂತ್ರವನ್ನು ಸಾಗಿಸುತ್ತಿದ್ದ ಟ್ರೇಲರ್ ತಿರುವು ಪಡೆಯುವ ವೇಳೆ ರಸ್ತೆಯ ಮಧ್ಯೆಯೇ ಸಿಲುಕಿಕೊಂಡಿತು.

ಇದನ್ನೂ ಓದಿ

ಟ್ರೇಲರ್ ಅಗಲವಾಗಿ ಅಡ್ಡವಾಗಿ ನಿಂತಿದ್ದರಿಂದ ಹೆದ್ದಾರಿಯ ಎರಡೂ ಬದಿಯ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಭಾನುವಾರ ರಜಾದಿನವಾಗಿದ್ದ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಬೀಚ್‌, ದೇವಾಲಯ ಹಾಗೂ ಇತರ ಪ್ರವಾಸಿ ತಾಣಗಳಿಗೆ ತೆರಳುತ್ತಿದ್ದ ನೂರಾರು ಮಂದಿ ಟ್ರಾಫಿಕ್‌ನಲ್ಲಿ ಸಿಲುಕಿ ಸಂಕಷ್ಟ ಅನುಭವಿಸಿದರು.

ಆಸ್ಪತ್ರೆಗಳಿಗೆ ತೆರಳುತ್ತಿದ್ದ ರೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೂ ಸಮಯಕ್ಕೆ ಗಮ್ಯಸ್ಥಾನ ತಲುಪಲು ಸಾಧ್ಯವಾಗದೆ ಪರದಾಡಿದರು. ಸುಮಾರು 45 ನಿಮಿಷಗಳ ಕಾರ್ಯಾಚರಣೆಯ ಬಳಿಕ ಟ್ರೇಲರ್ ತೆರವುಗೊಳಿಸಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !