ಶುರುವಾಗಿದೆ ಮೃತ ಮಾನವದೇಹವನ್ನು ಗೊಬ್ಬರವಾಗಿಸೋ ಖಯಾಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸಾವಯವಗೊಬ್ಬರ, ರಾಸಾಯನಿಕ ಗೊಬ್ಬರ, ಎರೆಹುಳು ಗೊಬ್ಬರ, ಯೂರಿಯಾ ಮಿಶ್ರಿತ ಗೊಬ್ಬರ ಹೀಗೆ ನಾನಾ ರೀತಿಯ ಗೊಬ್ಬರಗಳನ್ನು ನೀವು ಕೇಳಿರುತ್ತೀರಿ, ಆದರೆ ಮಾನವ ಮಿಶ್ರ ಗೊಬ್ಬರ ಎಂಬುದನ್ನು ಎಲ್ಲಾದರೂ ಕೇಳಿದ್ದೀರಾ ? ಆಧುನಿಕ ಜಗತ್ತಿನಲ್ಲಿ ಈಗ ಇಂಥದೊಂದು ವಿಲಕ್ಷಣ ಯೋಚನೆ ಅನೇಕ ಕಡೆಗಳಲ್ಲಿ ಚಾಲ್ತಿಗೆ ಬರುತ್ತಿದೆ. ಮಾನವ ಮೃತ ದೇಹವನ್ನು ವ್ಯವಸ್ಥಿತವಾಗಿ ಕೊಳೆಯಿಸಿ ಅದರಿಂದ ಗೊಬ್ಬರ ತಯಾರಿಸಿಕೊಡಲಾಗುತ್ತಿದೆ. ಈ ಗೊಬ್ಬರವನ್ನು ನೀವು ಇತರ ಗೊಬ್ಬರದಂತೆ ಹಣ್ಣು, ತರಕಾರಿ ಹೂವಿನಕುಂಡಗಳಿಗೆ ಹಾಕಬಹುದು.

ಅಮೆರಿಕದಂತಹ ಮುಂದುವರಿದ ದೇಶಗಳಲ್ಲಿಈ ರೂಢಿ ಚಾಲ್ತಿಗೆ ಬರುತ್ತಿದೆ. 2019ರಲ್ಲಿ ಮೊದಲಬಾರಿಗೆ ಇದನ್ನು ವಾಷ್ಟಿಂಗ್ಟನ್‌ ಕಾನೂನುಬದ್ಧಗೊಳಿಸಿತ್ತು. ನಂತರದಲ್ಲಿ ಕೊಲೊರಾಡೋ, ಒರೆಗಾನ್, ವರ್ಮೊಂಟ್ ಇತ್ತೀಚೆಗೆ ನ್ಯೂಯಾರ್ಕ್‌ ರಾಜ್ಯಗಳೂ ಕೂಡ ಈ ಮಾನವ ಮೃತದೇಹವನ್ನು ಗೊಬ್ಬರವಾಗಿ ಪರಿವರ್ತಿಸೋದನ್ನು ಕಾನೂನುಬದ್ಧಗೊಳಿಸಿವೆ.

natural organic reduction ಎಂದು ಕರೆಯಲ್ಪಡುವ ಅಭ್ಯಾಸವು ಈಗ ಹಲವು ಕಡೆಗಲ್ಲಿ ಚಾಲ್ತಿಗೆ ಬರುತ್ತಿದೆ. ಈ ಪ್ರಕ್ರಿಯೆಯಲ್ಲಿ ಮೃತ ಮಾನವ ದೇಹವನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾದ ಮಣ್ಣಿನಲ್ಲಿ ಮರದ ಪುಡಿ, ಅಲ್ಫಾಲ್ಫಾ ಮತ್ತು ಒಣಹುಲ್ಲಿನ ಹುಲ್ಲಿನಂತಹ ಆಯ್ದ ವಸ್ತುಗಳ ಜೊತೆಗೆ ದೇಹವನ್ನು ಮುಚ್ಚಲ್ಪಟ್ಟ ದೊಡ್ಡ ಪಾತ್ರೆಯೊಂದಲ್ಲಿ ಹಾಕಲಾಗುತ್ತದೆ. ನಂತರದಲ್ಲಿ ಅದು ಸೂಕ್ಷ್ಮಾಣು ಜೀವಿಗಳಿಂದ ಸುಮಾರು ಒಂದು ತಿಂಗಳವರೆಗೆ ವಿಘಟನೆಗೆ ಒಳಪಡುತ್ತದೆ. ನಂತರದಲ್ಲಿ ಅನ್ನು ವಿಶೇಷ ಶಾಖ ಪ್ರಕ್ರಿಯೆಗೆ ಒಳಪಡಿಸಿ ಅಪಾಯಕಾರಿ ರಾಸಾಯನಿಕಗಳನ್ನು ನಾಶಪಡಿಸಲಾಗುತ್ತದೆ. ಹೀಗೆ ತಿಂಗಳುಗಳ ಕಾಲ ನಾನಾ ವಿಧಾನಗಳ ಮೂಲಕ ಮಾನವ ದೇಹವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಅದನ್ನು ಅವರ ಪ್ರೀತಿ ಪಾತ್ರರಿಗೆ ಕೊಡಲಾಗುತ್ತದೆ. ಇದಕ್ಕೆಂದೇ ಮಾನವ ಮಿಶ್ರಿತ ಗೊಬ್ಬರವನ್ನು ತಯಾರಿಸುವ ಕೇಂದ್ರಗಳೂ ಸ್ಥಾಪನೆಯಾಗಿದೆ. ಅವರ ಪ್ರಕಾರ ಈ ವಿಧಾನವು ಸುಡುವ ಅಥವಾ ಹೂಳುವ ವಿಧಾನಕ್ಕಿಂತ ಉತ್ತಮವಾಗಿದೆ. ಇದರಿಂದ ಸುಮಾರು ಒಂದು ಟನ್‌ ಇಂಗಾಲ ವಾತಾವರಣ ಸೇರುವುದನ್ನು ತಪ್ಪಿಸಬಹುದಾಗಿದೆ. ಅಲ್ಲದೇ ಶವಪೆಟ್ಟಿಗೆಯು ಮರಮುಟ್ಟುಗಳು ಇತ್ಯಾದಿ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತದೆ. ಈ ವಿಧಾನದಿಂದ ಅವುಗಳನ್ನೂ ಉಳಿಸಬಹುದಾಗಿದೆ. ಎರಡಕ್ಕೂ ತಗಲುವ ವೆಚ್ಚವೂ ಸರಿಸುಮಾರು ಒಂದೇ ಆಗಿದೆ.

ಆದರೆ ಈ ವಿಧಾನದ ಕುರಿತು ಈಗ ನೈತಿಕ ಪ್ರಶ್ನೆಗಳು ಎದ್ದಿವೆ. ಚರ್ಚ್‌ ಮುಂತಾದ ಧಾರ್ಮಿಕ ಕೇಂದ್ರಗಳು ಈ ವಿಧಾನವನ್ನು ವಿರೋಧಿಸುತ್ತಿವೆ. ಮಾನವ ದೇಹವನ್ನು ವ್ಯವಸ್ಥಿತವಾಗಿ ಗೊಬ್ಬರವನ್ನಾಗಿಸುವುದು ಎಷ್ಟರಮಟ್ಟಿಗೆ ಸರಿ? ಎಂಬುದರ ಕುರಿತು ಪ್ರಶ್ನೆಗಳು ವ್ಯಕ್ತವಾಗುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!