HEALTH | ಹಲ್ಲುಜ್ಜೋಕೂ ರೂಲ್ಸ್ ಇದೆ ಸ್ವಾಮಿ! ಹಲ್ಲು ಉಜ್ಜುವಾಗ ಈ ತಪ್ಪುಗಳನ್ನು ಮಾಡಬೇಡಿ..

ಪ್ರತಿಯೊಬ್ಬರಿಗೂ ಅವರದ್ದೇ ಬ್ರಶಿಂಗ್ ಸ್ಟೈಲ್ ಇದೆ. ಅವರದ್ದೇ ಸಮಯ ಇದೆ, ಅವರದ್ದೇ ರೀತಿಯೂ ಇದೆ. ಆದರೆ ಹಲ್ಲು ಉಜ್ಜುವಾಗ ಕೆಲವು ತಪ್ಪುಗಳನ್ನು ಮಾಮೂಲಾಗಿಯೇ ಮಾಡ್ತೇವೆ. ಆದರೆ ಅದು ತಪ್ಪು ಎಂದು ಗೊತ್ತಿರೋದಿಲ್ಲ. ಬ್ರಶ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ..

  • ಒಂದೇ ಬ್ರಶ್‌ಗೆ ವಯಸ್ಸಾಗೋವರೆಗೂ ಬಳಸೋದು, ಬ್ರಶ್ ಅಜ್ಜಿ ಕೂದಲಂತೆ ಕಾಣಿಸಿದರೂ ಇದು ನನಗೆ ಕಂಫರ್ಟ್ ಅಂತ ಅದೇ ಬ್ರಶ್ ಬಳಸೋದು ಒಳ್ಳೆಯದಲ್ಲ.
  • ತುಂಬಾ ಹೊತ್ತು ಹಲ್ಲುಜ್ಜೋಕೆ ಶುರು ಮಾಡಿದರೆ ಹಲ್ಲಿನ ಬಣ್ಣ ಬದಲಾಗುತ್ತದೆ ಅನ್ನೋ ನಂಬಿಕೆ ಕೆಲವರಲ್ಲಿದೆ. ಆದರೆ ಎರಡು ನಿಮಿಷ ಬ್ರಶ್ ಮಾಡಲೇಬೇಕು.
  • ಹಲ್ಲು ಉಜ್ಜಿದ ತಕ್ಷಣ ನೀರಿನಲ್ಲಿ ಬಾಯಿ ಮುಕ್ಕಳಿಸಬೇಡಿ. ಇದು ಎಲ್ಲರೂ ಮಾಡೋ ಸಾಮಾನ್ಯ ಕೆಲಸ. ಆದರೆ ಬಾಯಿಗೆ ನೀರು ಹಾಕಿದ ನಂತರ ಟೂತ್‌ಪೇಸ್ಟ್ ನೀರಿನ ಜತೆ ಮಿಕ್ಸ್ ಆಗಿ ದೇಹದ ಒಳ ಹೋಗೋ ಸಾಧ್ಯತೆ ಇದೆ. ಹಾಗಾಗಿ ನೀರಿನ ಬದಲು ಮೌತ್‌ವಾಶ್ ಬಳಸಿ.
  • ಬಾತ್‌ರೂಂನಲ್ಲಿ ಬ್ರಶ್ ಇಡಬೇಡಿ. ಟೂತ್‌ಬ್ರಶ್ ಇಡೋದ್ರಿಂದ ಬ್ಯಾಕ್ಟೀರಿಯಾ ಬ್ರಶ್ ಒಳ ಹೊಕ್ಕುತ್ತದೆ.
  • ಬ್ರಶ್ ಆದ ತಕ್ಷಣ ನಾಲಗೆ ಕಸ ತೆಗೆಯದೇ ಇರುವುದು ತಪ್ಪು, ಟಂಗ್ ಕ್ಲೀನರ್ ಬಳಸಿ
  • ಗಟ್ಟಿಯಾದ ಬ್ರಶ್ ಬಳಸಿ ಒಸಡುಗಳನ್ನು ಹಾಳುಮಾಡಿಕೊಳ್ಳಬೇಡಿ. ಸ್ಮೂತ್ ಆದ ಬ್ರಶ್ ಬಳಸಿ.
  • 45 ಡಿಗ್ರಿಯಲ್ಲಿ ಬ್ರಶ್ ಇಟ್ಟು ಪುಟ್ಟ ಸರ್ಕಲ್ ಮಾಡುತ್ತಾ ಹಲ್ಲು ಉಜ್ಜಬೇಕು. ಇದು ಸರಿಯಾದ ವಿಧಾನ
  • ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜುವುದನ್ನು ಮರೆಯಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!