ರಸಗುಲ್ಲಾದಿಂದಾಗಿ 40ಗಂಟೆಗಳ ಕಾಲ ರೈಲ್ವೆ ಸಂಚಾರ ರದ್ದು, 100ಕ್ಕೂ ಹೆಚ್ಚು ರೈಲುಗಳ ಮಾರ್ಗ ಬದಲಾವಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಸಗುಲ್ಲಾ.. ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರೂರುತ್ತೆ ಆದರೆ ರಸಗುಲ್ಲಾ ಕಾರಣಕ್ಕೆ ಸುಮಾರು 40 ಗಂಟೆಗಳ ಕಾಲ ನೂರಕ್ಕೂ ಹೆಚ್ಚು ರೈಲುಗಳು ರದ್ದಾದ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ. ಲಖಿಸರಾಯ್‌ನಲ್ಲಿರುವ ಬರಾಹಿಯಾ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಆಗ್ರಹಿಸಿ ಸ್ಥಳೀಯರು ಸುಮಾರು 40 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದಾರೆ. ರೈಲು ಹಳಿಗಳ ಮೇಲೆ ಟೆಂಟ್‌ಗಳನ್ನು ಹಾಕಿ ಸಂಚಾರಕ್ಕೆ ಅಡ್ಡಿಯುಂಟುಮಾಡಿದರು.  ಇದರಿಂದಾಗಿ ಹೌರಾ-ದೆಹಲಿ ಮಾರ್ಗದ ಹತ್ತಕ್ಕೂ ಹೆಚ್ಚು ರೈಲುಗಳು 24 ಗಂಟೆಗಳ ಕಾಲ ರದ್ದಾಗಿವೆ. 100ಕ್ಕೂ ಹೆಚ್ಚು ರೈಲುಗಳ ಮಾರ್ಗವನ್ನು ಬದಲಿಸಬೇಕಾಯಿತು.

ಕಾರಣ, ಲಖಿಸಾಯ್‌ನಲ್ಲಿ ಮಾಡುವ ರಸಗುಲ್ಲಾ ದೇಶದಾದ್ಯಂತ ಜನಪ್ರಿಯವಾಗಿದೆ. ಇಲ್ಲಿ ತಯಾರಿಸಿದ ಸಿಹಿತಿಂಡಿಗಳನ್ನು ಹತ್ತಿರದ ರಾಜ್ಯಗಳಿಗೆ ರವಾನಿಸಲಾಗುತ್ತದೆ. ಲಖಿಸರಾಯ್‌ನಲ್ಲಿ 200 ಕ್ಕೂ ಹೆಚ್ಚು ಸಿಹಿ ಅಂಗಡಿಗಳಿವೆ. ದಿನವೊಂದಕ್ಕೆ ಟನ್ ಗಟ್ಟಲೆ ಸಿಹಿ ತಯಾರಿಸಿ ಬೇರೆಡೆಗೆ ಸಾಗಿಸುತ್ತಾರೆ. ರೈಲು ಬರಾಹಿಯಾ ಸ್ಟೇಷನ್‌ನಲ್ಲಿ ನಿಲುಗಡೆಯಾಗದ ಕಾರಣ ವ್ಯಾಪಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ದೇಶದ ನಾನಾ ಭಾಗಗಳಿಗೆ ಸಾಗಿಸಬೇಕಾದ ರಸಗುಲ್ಲಗಳನ್ನು ಸಕಾಲದಲ್ಲಿ ತಲುಪಿಸಲು ಸಾಧ್ಯವಾಗುತ್ತಿಲ್ಲ, ರೈಲು ಹೊರತುಪಡಿಸಿ ಬೇರೆ ವಾಹನಗಳನ್ನು ಆಶ್ರಯಿಸಿದರೆ ವೆಚ್ಚ ಜಾಸ್ತಿಯಾಗುತ್ತದೆ ಎಂಬುದು ವರ್ತಕರ ವಾದ.

ವರ್ತರೊಬ್ಬರ ಹೇಳಿಕೆ ಪ್ರಕಾರ ‘ಹಿಂದೆ ರೈಲುಗಳ ಮೂಲಕ ವ್ಯಾಪಾರ ನಡೆಯುತ್ತಿದ್ದು, ಕಡಿಮೆ ದರದಲ್ಲಿ ಸಮಯಕ್ಕೆ ಸಾಗಿಸಲು ಸಾಧ್ಯವಾಗುತ್ತಿತ್ತು. ಆದರೆ ಪ್ರಸ್ತುತ ಬರಾಹಿಯಾ ನಿಲ್ದಾಣದಲ್ಲಿ ನಿಲ್ಲಿಸದ ಕಾರಣ ವ್ಯಾಪಾರ ಕಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ವ್ಯಾಪಾರಿಗಳ ಪ್ರತಿಭಟನೆಗೆ ಸ್ಪಂದಿಸಿದ ರೈಲ್ವೆ ಅಧಿಕಾರಿಗಳು ಒಂದು ತಿಂಗಳೊಳಗೆ ಬರಾಹಿಯಾ ನಿಲ್ದಾಣದಲ್ಲಿ ಒಂದು ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಅನುಮತಿಸಲಾಗುವುದು. ಜೊತೆಗೆ ಮೂರು ತಿಂಗಳೊಳಗೆ ಇತರ ರೈಲುಗಳು ಇಲ್ಲಿ ನಿಲುಗಡೆ ಮಾಡುವುದಾಗಿ ಲಿಖಿತ ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!