ಪ್ರೀತಿಸಿ ಮದುವೆಯಾದ ಎರಡೇ ತಿಂಗಳಿಗೆ ಪತ್ನಿಗೆ ಕೈಕೊಟ್ಟು ಬೇರೊಂದು ಯುವತಿ ಜತೆ ಪತಿ ಎಸ್ಕೇಪ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರೀತಿಸಿ ಮದುವೆಯಾದ ಎರಡೇ ತಿಂಗಳಿಗೆ ಪತಿ ಪತ್ನಿಗೆ ಕೈಕೊಟ್ಟು ಬೇರೊಂದು ಯುವತಿಯೊಂದಿಗೆ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ತ್ಯಾಮಗೊಂಡ್ಲುವಿನಲ್ಲಿ ನಡೆದಿದೆ.

20 ವರ್ಷದ ಪೂರ್ಣಿಮಾ ಹಾಗೂ 24 ವರ್ಷದ ಪ್ರದೀಪ್ ಪರಸ್ಪರ ಪ್ರೀತಿಸಿ, ಎರಡು ತಿಂಗಳ ಹಿಂದೆ ವಿವಾಹವಾಗಿದ್ದರು.

ಪೂರ್ಣಿಮಾಳೆ ಬೇಕು ಎಂದು ಹಠ ಹಿಡಿದು ಆಕೆಯ ಮನೆಯವರನ್ನು ಒಪ್ಪಿಸಿ ವಿವಾಹವಾಗಿದ್ದ. ಹಣ, ಚಿನ್ನಾಭರಣಗಳನ್ನು ಕೊಟ್ಟು ಅದ್ದೂರಿಯಾಗಿ ವಿವಾಹವನ್ನು ಮಾಡಿಕೊಟ್ಟಿದ್ದರು. ಆದರೆ ಈಗ ಮದುವೆಯಾದ ಎರಡೇ ತಿಂಗಳಿಗೆ ಪತ್ನಿಯನ್ನು ಬಿಟ್ಟು ಪತಿ ಪ್ರದೀಪ್ ನಾಪತ್ತೆಯಾಗಿದ್ದು, ಬೇರೊಂದು ಯುವತಿಯನ್ನು ವಿವಾಹವಾಗಿದ್ದಾನೆ .

ಪ್ರದೀಪ್ ಮನೆ ಮುಂದೆ ನ್ಯಾಯಕ್ಕಾಗಿ ಪೂರ್ಣಿಮಾ ಪ್ರತಿಭಟನೆ ನಡೆಸಿದ್ದಾಳೆ. ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!