May 6, 2026
Wednesday, May 6, 2026
spot_img

ಹೆಂಡತಿಗೆ ಪ್ರೀತಿಯಿಂದ ಕೋವಾ ತಿನ್ನಿಸಿ ಕೊಂದೇ ಬಿಟ್ಟ ಪಾಪಿ ಪತಿ! ದಪ್ಪಗಿರೋದು ತಪ್ಪಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೆಂಡತಿ ದಪ್ಪಗಿದ್ದಾಳೆ ಎಷ್ಟು ಹೇಳಿದ್ರೂ ಸಣ್ಣ ಆಗ್ತಿಲ್ಲ ಎಂದು ಪತಿಯೇ ಕೈಯಾರ ವಿಷ ನೀಡಿ ಕೊಂದ ಘಟನೆ ಆಂಧ್ರಪ್ರದೇಶದ ಕಡಪದಲ್ಲಿ ನಡೆದಿದೆ.

ಪ್ರೊದ್ದುಟೂರು ನಿವಾಸಿ ಕಿರಣ್‌ ಕೊಲೆ ಮಾಡಿರುವ ಆರೋಪಿ. ಮದ್ದೂರಿನ ಪದ್ಮಜಾ ಮೃತರು. ಇವರಿಬ್ಬರೂ ಕೆಲ ವರ್ಷಗಳ ಹಿಂದೆ ಮದುವೆಯಾದವರು. ಮದುವೆಯಾಗುವ ವೇಳೆಯೂ ಪದ್ಮಜಾ ದಪ್ಪ ಇದ್ದರು. ಆದರೂ ಅವರಿಗೆ ಇರುವ ಆಸ್ತಿಯನ್ನು ನೋಡಿ ಕಿರಣ್‌ ಮದುವೆಗೆ ಒಪ್ಪಿಕೊಂಡು ಮನೆ ಅಳಿಯನಾಗಿಯೇ ಎಂಟ್ರಿ ಕೊಟ್ಟಿದ್ದ.

ಕೆಲ ಸಮಯ ಸಂತಸದಿಂದ ಸಂಸಾರ ನಡೆದಿದೆ. ಇದಾದ ನಂತರ ಪದ್ಮಜಾ ಗರ್ಭಿಣಿಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆಯ ನಂತರ ತೂಕ ಇನ್ನಷ್ಟು ಏರಿದೆ. ತನ್ನ ಹೆಂಡತಿಗೆ ನೋಡೋದಕ್ಕೆ ಚೆನ್ನಾಗಿಲ್ಲ, ದಪ್ಪ ಇದ್ದಾಳೆ ಎಂದು ಸಾಫ್ಟ್‌ವೇರ್‌ ಇಂಜಿನಿಯರ್‌ ಕಿರಣ್‌ ಕೊರಗುತ್ತಿದ್ದ.

ನಿತ್ಯವೂ ಸಣ್ಣ ಆಗು, ಜಾಸ್ತಿ ತಿನ್ನಬೇಡ ಎಂದು ಹಿಂಸೆ ನೀಡುತ್ತಿದ್ದ. ಆದರೆ ಪದ್ಮಜಾಗೆ ಅದು ಸಾಧ್ಯವಾಗಿಲ್ಲ. ಆಗ ಆಕೆಯನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಾನೆ. ಯುಟ್ಯೂಬ್‌ನಲ್ಲಿ ಹೆಂಡತಿಯನ್ನು ಕೊಲೆ ಮಾಡುವುದು ಹೇಗೆ ಎನ್ನುವ ಬಗ್ಗೆ ರೀಸರ್ಚ್‌ ಮಾಡಿದ್ದಾನೆ. ಅಲ್ಲಿ ಆತನಿಗೆ ಸ್ಟ್ರಾಂಗ್‌ ವಿಷ ನೀಡುವ ವ್ಯಕ್ತಿ ಸಿಕ್ಕಿದ್ದಾರೆ. ಅವರಿಗೆ ದುಡ್ಡು ಕೊಟ್ಟು ವಿಷ ತರಿಸಿಕೊಂಡಿದ್ದಾನೆ.

ತನ್ನ ತಾಯಿಯನ್ನು ನೋಡಿಕೊಂಡು ಬರೋಣ ಎಂದು ಪ್ರೊದ್ದುಟೂರಿಗೆ ಕರೆದುಕೊಂಡು ಬಂದಿದ್ದ. ಅಲ್ಲಿ ಎಲ್ಲಿಲ್ಲದ ಪ್ರೀತಿಯನ್ನು ತೋರಿಸಿದ್ದ ಕಿರಣ್‌ ಬಗ್ಗೆ ಪತ್ನಿಗೆ ಕಿಂಚಿತ್ತೂ ಅನುಮಾನ ಇರಲಿಲ್ಲ. ಆತ ಹಾಲಿನ ಕೋವಾಕ್ಕೆ ವಿಷ ಸುರಿದುಕೊಂಡು ಬಂದು ಪತ್ನಿಗೆ ಪ್ರೀತಿಯಿಂದ ತಿನ್ನಿಸಿದ್ದಾನೆ. ಅದನ್ನು ತಿಂದ ಪದ್ಮಜಾ ನೆಲಕ್ಕೆ ಬಿದ್ದಿದ್ದಾರೆ. ಆದರೆ ಅವರ ಪ್ರಾಣ ಹೋಗಿಲ್ಲ. ಕಿರಣ್‌ ದಿಂಬಿನಿಂದ ಉಸಿರುಗಟ್ಟಿಸಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ನಂತರ ಹೃದಯಾಘಾತವಾಯ್ತು ಎಂದು ನಾಟವಾಡಿದ್ದಾನೆ.

ಎಲ್ಲರೂ ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ನಂಬಿ ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದಾರೆ. ಆದರೆ ಪೊಲೀಸರು ಇದು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿ ಪೋಸ್ಟ್‌ಮಾರ್ಟಮ್‌ ಮಾಡಿಸಿದ್ದಾರೆ. ನಂತರ ಕಿರಣ್‌ನ್ನು ವಿಚಾರಣೆ ನಡೆಸಿದಾಗ ಆತ ಸತ್ಯ ಹೇಳಿದ್ದಾನೆ. ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !