ಹುಷಾರ್…ಗುಜರಾತಿಗೆ ಕಾಲಿಟ್ಟಿದೆ COVID ರೂಪಾಂತರಿತ ‘XE’

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಭಾರತದಲ್ಲಿ ಮೊದಲ ಹೊಸ COVID ರೂಪಾಂತರಿತ ‘XE’ ಪತ್ತೆಯಾಗಿದ್ದು, ಗುಜರಾತ್ ‌ನ ವ್ಯಕ್ತಿ ರೂಪಾಂತರ XE ಸೋಂಕಿಗೆ ಒಳಗಾಗಿದ್ದಾನೆ.
ಕೋವಿಡ್ 19 ರೂಪಾಂತರಿ ಎಕ್ಸ್ ಇ ಭಾರತದಲ್ಲಿ ಮೊದಲು ಮುಂಬೈನಲ್ಲಿ ದಾಖಲಾಗಿದೆ ಎನ್ನಲಾಗಿತ್ತು.ಇದೀಗ ಗುಜರಾತ್ ನಲ್ಲಿ ಎಕ್ಸ್ ಇ ರೂಪಾಂತರಿಯ ಇನ್ನೊಂದು ಕೇಸ್ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ವಡೋದರಾದ ಗೋತ್ರಿ ಎಂಬ ಏರಿಯಾದ 60 ವರ್ಷದ ವ್ಯಕ್ತಿಯಲ್ಲಿ ಈ ರೂಪಾಂತರಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚೆಗೆ UK ಯಲ್ಲಿ ಹೊಸ COVID ರೂಪಾಂತರಿತ ‘XE’ ಕಂಡುಬಂದಿದೆ ಮತ್ತು ಇದು COVID-19 ನ BA.2 ಉಪವರ್ಗಕ್ಕಿಂತ ಹೆಚ್ಚು ಹರಡಬಹುದು ಎಂದು ಹೇಳಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!