ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ ಹೈದರಾಬಾದ್‌: ಮುಂಬೈ ವಿರುದ್ಧ 277 ರನ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ಸ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಅಬ್ಬರದ ಬ್ಯಾಟಿಂಗ್ ನಡೆಸಿದೆ.

ಮುಂಬೈ ಬೌಲರ್​ಗಳನ್ನು ಮನಬಂದಂತೆ ದಂಡಿಸಿದ ಬ್ಯಾಟ್ಸಮನ್ ಗಳು ಬೌಂಡರಿ-ಸಿಕ್ಸರ್​ಗಳ ಸುರಿ ಮಳೆಯನ್ನೇ ಸುರಿಸಿದ್ದಾರೆ.​​ ನಿಗದಿತ 20 ಓವರ್​ಗೆ 3 ವಿಕೆಟ್ ನಷ್ಟಕ್ಕೆ 277 ರನ್​ ಸಿಡಿಸಿದರು.

ಈ ಬೃಹತ್​ ಸ್ಕೋರ್​ ಮೂಲಕ ಸನ್​ರೈಸರ್ಸ್​​ ಹೈದರಾಬಾದ್​​ ತಂಡವು ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ರನ್​ ಗಳಿಸಿದ ತಂಡ ಎಂಬ ದಾಖಲೆಯನ್ನು ನಿರ್ಮಿಸಿದೆ. ಈ ಮೂಲಕ 2013ರಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ನಿರ್ಮಿಸಿದ್ದ ದಾಖಲೆಯನ್ನು ಹೈದರಾಬಾದ್​​ ದೂಳಿಪಟ ಮಾಡಿದೆ.

ಆರ್​ಸಿಬಿ ತಂಡವು ಪುಣೆ ವಾರಿಯರ್ಸ್​​ ವಿರುದ್ಧ 2013ರಲ್ಲಿ 263 ರನ್​ ಸಿಡಿಸಿದ್ದು ಐಪಿಎಲ್​ ಇತಿಹಾಸದಲ್ಲಿಯೇ ಅತಿ ದೊಡ್ಡ ಸ್ಕೋರ್​ ಆಗಿತ್ತು.ಆದರೆ ಇಂದು ಮುಂಬೈ ವಿರುದ್ಧ ಹೈದರಾಬಾದ್ ದಾಖಲೆ ಮುರಿದಿದೆ.

ಆರಂಭದಲ್ಲಿ ಬ್ಯಾಟಿಂಗ್ ನಲ್ಲಿ ಅಗರ್ವಾಲ್ ೧೧ ರನ್ ಗಳಿಸಿ ಔಟಾದರು. ಎರಡನೇ ವಿಕೆಟಿಗೆ ಟ್ರಾವಿಸ್‌ ಹೆಡ್‌ ಮತ್ತು ಅಭಿಷೇಕ್‌ ಶರ್ಮಾ 23 ಎಸೆತಗಳಲ್ಲಿ 68 ರನ್‌ ಹೊಡೆದರು. ಟ್ರಾವಿಸ್‌ ಹೆಡ್‌ 62 (24 ಎಸೆತ, 9 ಬೌಂಡರಿ, 3 ಸಿಕ್ಸರ್‌) ಹೊಡೆದು ಔಟಾದರು.ಅಭಿಷೇಕ್‌ ಶರ್ಮಾ ಮತ್ತು ಮಾರ್ಕ್ರಾಮ್ 19 ಎಸೆತಗಳಲ್ಲಿ 48 ರನ್‌ ಜೊತೆಯಾಟವಾಡಿದರು. ಅಭಿಷೇಕ್‌ ಶರ್ಮಾ 63 ರನ್‌ (23 ಎಸೆತ, 3 ಬೌಂಡರಿ, 7 ಸಿಕ್ಸರ್‌) ಹೊಡೆದು ವಿಕೆಟ್‌ ಒಪ್ಪಿಸಿದರು.

ಬಳಿಕ ಮಾರ್ಕ್ರಾಮ್ ಮತ್ತು ಹೆನ್ರಿಕ್‌ ಕ್ಲಾಸನ್‌ ಮುಂಬೈ ಬೌಲರ್‌ಗಳನ್ನು ಅಕ್ಷರಶ: ಚೆಂಡಾಡಿದರು. ಇಬ್ಬರು ನಾಲ್ಕನೇ ವಿಕೆಟಿಗೆ 55 ಎಸೆತಗಳಲ್ಲಿ 116 ರನ್‌ ಹೊಡೆದು ತಂಡದ ಮೊತ್ತವನ್ನು 270 ರನ್‌ಗಳ ಗಡಿಯನ್ನು ದಾಟಿಸಿದರು. ಕ್ಲಾಸನ್‌ ಔಟಾಗದೇ 80 ರನ್‌ ( 34 ಎಸೆತ, 4 ಬೌಂಡರಿ, 7 ಸಿಕ್ಸರ್‌), ಮಾರ್ಕ್ರಾಮ್ ಔಟಾಗದೇ 42 ರನ್‌ ( 28 ಎಸೆತ, 2 ಬೌಂಡರಿ, 1 ಸಿಕ್ಸರ್)‌ ಬಾರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!