August 13, 2026
Thursday, August 13, 2026
spot_img

Hydration Tips | ನೀರು ಕಡಿಮೆ ಕುಡಿದ್ರೆ ದೇಹದಲ್ಲಿ ಏನ್ ಬದಲಾವಣೆ ಆಗುತ್ತೆ?

ನಮ್ಮ ದೇಹಕ್ಕೆ ಆಹಾರ ಎಷ್ಟು ಮುಖ್ಯವೋ, ನೀರು ಕೂಡ ಅಷ್ಟೇ ಮುಖ್ಯ. ಆದರೆ ದಿನವಿಡೀ ಕೆಲಸದ ಒತ್ತಡದಲ್ಲಿ ಅಥವಾ ಬ್ಯುಸಿ ಲೈಫ್‌ನಲ್ಲಿ ಹಲವರು ಸಾಕಷ್ಟು ನೀರು ಕುಡಿಯೋದನ್ನ ಮರೆತುಬಿಡುತ್ತಾರೆ. ನೀರಲ್ವ ಪರವಾಗಿಲ್ಲ ಕಡಿಮೆ ಕುಡಿದ್ರೆ ಏನು ಆಗಲ್ಲ ಅನ್ನೋರಿಗೆ ಈ ಆರ್ಟಿಕಲ್ ಓದೋಕೆ ಕೊಡಿ.

ನೀರಿನ ಪ್ರಮಾಣ ಕಡಿಮೆಯಾದಾಗ ದೇಹದ ಎನರ್ಜಿ ಲೆವೆಲ್ ಇಳಿಯುತ್ತದೆ. ಸಣ್ಣ ಕೆಲಸ ಮಾಡಿದ್ರೂ ಸುಸ್ತು, ದಣಿವು ಹೆಚ್ಚು ಕಾಣಿಸಬಹುದು. ವರ್ಕೌಟ್ ಮಾಡುವಾಗ ಸ್ಟಾಮಿನಾ ಕೂಡ ಕಡಿಮೆ ಆಗುತ್ತದೆ.

ದೇಹದಲ್ಲಿ ನೀರಿನ ಕೊರತೆ ಆದಾಗ ಮೆದುಳಿಗೆ ಸರಿಯಾದ ಫ್ಲೂಯಿಡ್ ಬ್ಯಾಲೆನ್ಸ್ ಸಿಗೋದಿಲ್ಲ. ಇದರಿಂದ ತಲೆನೋವು, ತಲೆಸುತ್ತು ಅಥವಾ ಫೋಕಸ್ ಕಡಿಮೆ ಆಗುವ ಸಮಸ್ಯೆ ಕಾಣಿಸಬಹುದು.

ಇದನ್ನೂ ಓದಿ:

ಸಾಕಷ್ಟು ನೀರು ಕುಡಿಯದೇ ಇದ್ದರೆ ಚರ್ಮ ಡ್ರೈ ಆಗಿ, ಕಾಂತಿ ಕಡಿಮೆ ಕಾಣಬಹುದು. ಹೈಡ್ರೇಶನ್ ಉತ್ತಮ ಇದ್ದರೆ ಸ್ಕಿನ್ ಕೂಡ ಫ್ರೆಶ್ ಆಗಿರುತ್ತದೆ.

ಕೆಲವೊಮ್ಮೆ ದಾಹವನ್ನು ನಾವು ಹಸಿವು ಅಂತ ತಪ್ಪಾಗಿ ಅರ್ಥ ಮಾಡ್ಕೊಳ್ತೀವಿ. ಇದರಿಂದ ಅನಗತ್ಯವಾಗಿ ಹೆಚ್ಚು ತಿನ್ನುವ ಸಾಧ್ಯತೆ ಇರುತ್ತದೆ.

ನೀರು ಕಡಿಮೆ ಕುಡಿದರೆ ಜೀರ್ಣಕ್ರಿಯೆ ನಿಧಾನವಾಗಿ, ಮಲಬದ್ಧತೆ ಸಮಸ್ಯೆ ಕಾಣಿಸಬಹುದು.

ಸಿಂಪಲ್ ಆಗಿ ಹೇಳೋದಾದ್ರೆ, ದೇಹ ಸರಿಯಾಗಿ ಕೆಲಸ ಮಾಡಬೇಕಂದ್ರೆ ನೀರು ಸಾಕಷ್ಟು ಬೇಕು. ದಿನಪೂರ್ತಿ ಸ್ವಲ್ಪ ಸ್ವಲ್ಪವಾಗಿ ನೀರು ಕುಡಿಯೋ ಹವ್ಯಾಸ ಬೆಳೆಸಿಕೊಳ್ಳಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !