Friday, March 24, 2023

Latest Posts

ನಾನು ನಿಮ್ಮ ಪರಿವಾರದ ಸದಸ್ಯ: ದಾವೂದಿ ಬೋಹ್ರಾ ಕ್ಯಾಂಪಸ್ ನಲ್ಲಿ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮುಂಬೈ ನ ದಾವೂದಿ ಬೊಹ್ರಾ ಸಮುದಾಯದ ಪ್ರಮುಖ ಶಿಕ್ಷಣ ಸಂಸ್ಥೆಯಾದ ಅಲ್ಜಮಿಯಾ-ತುಸ್-ಸೈಫಿಯಾ ಅರೇಬಿಕ್ ಅಕಾಡೆಮಿಯ ಮುಂಬೈ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಈ ಸೌಭಾಗ್ಯ ಕೆಲವೇ ಕೆಲವರಿಗೆ ಮಾತ್ರ ಲಭಿಸಿದೆ. ಈ ಪರಿವಾರದ ನಾಲ್ಕು ತಲೆಮಾರು ಜೊತೆ ಆತ್ಮೀಯ ಸಂಬಂಧ ಹೊಂದಿದ್ದೇನೆ. ವಿಶೇಷ ಅಂದರೆ ಈ ನಾಲ್ಕು ತಲೆಮಾರಿನ ಮುಖಂಡರು ನನ್ನ ಮನೆಗೆ ಆಗಮಿಸಿದ್ದಾರೆ. ನಾನು ನಿಮ್ಮ ಪರಿವಾರದ ಸದಸ್ಯ. ಹೀಗಾಗಿ ಈ ಪರಿವಾರಕ್ಕೆ ಭೇಟಿ ನೀಡುವ ಸಂದರ್ಭ ನನ್ನ ಸಂತಸ ಇಮ್ಮಡಿಗೊಂಡಿದೆ ಎಂದರು.

ನನಗೆ ನಿಮ್ಮ ಬಳಿ ಬರುವುದು ಎಂದರೆ ಖುಷಿ. ಯಾಕೆಂದರೆ ನನ್ನ ಕುಟುಂಬಕ್ಕೆ ಬಂದ ಸಂತಸ ಆಗುತ್ತಿದೆ ಎಂದರು.
ದಾವುದಿ ಬೋಹ್ರಾ ಸಮುದಾಯ ಪರಿವರ್ತನೆ ಹಾಗೂ ಅಭಿವೃದ್ಧಿ ಚಿಂತನೆ ಮಾಡುವಲ್ಲಿ ಮುಂಚೂಣಿಯಲ್ಲಿದೆ. ಇಂದು ಅಲ್ಜಮಯ ತಸ್ ಸೈಫಿಯಾ ಶಿಕ್ಷಣ ಕ್ಯಾಂಪಸ್ ವಿಸ್ತರಣೆ ಇದಕ್ಕೆ ಊದಾಹರಣೆಯಾಗಿದೆ.

ದಾವುದಿ ಬೋಹ್ರಾ ಸಮುದಾಯ ಹಾಗೂ ನನ್ನ ನಡುವಿನ ಸಂಬಂಧಕ್ಕೆ ಸುದೀರ್ಘ ಇತಿಹಾಸವಿದೆ. ಒಂದು ಬಾರಿ ದಾವುದಿ ಬೋಹ್ರಾ ಕ್ಯಾಂಪಸ್‌ಗೆ ಬೇಟಿ ನೀಡಿದಾಗ ಸಮುದಾಯದ ಮುಖಂಡರ ವಯಸ್ಸು 99. ಅವರ ಕಮಿಟ್‌ಮೆಂಟ್ ಅಂದರೆ 99ರ ಇಳಿವಯಸ್ಸಿನಲ್ಲೂ ಮಕ್ಕಳಿಗೆ ಪಾಠ ಮಾಡುತ್ತಿದ್ದರು. 1000 ಮಕ್ಕಳು ಕುಳಿತು ಕೇಳುತ್ತಿದ್ದರು. ಈ ದೃಶ್ಯ ನಾನು ಯಾವತ್ತೂ ಮರೆಯುವುದಿಲ್ಲ ಎಂದರು.

ಇದೇ ವೇಳೆ ಪ್ರಧಾನಿ ಮೋದಿ ವಿಶೇಷ ಮನವಿಯನ್ನು ಮಾಡಿದ್ದೂ, ನೀವು ಹಾಕಿದ ವಿಡಿಯೋ ನೋಡಿದೆ. ಇದರಲ್ಲಿ ಪ್ರತಿ ಬಾರಿ ನೀವು ಪ್ರಧಾನಿ, ಅಂದಿನ ಮುಖ್ಯಮಂತ್ರಿ ಎಂದು ಹಲವು ಬಾರಿ ಹೇಳಿದ್ದಾರೆ. ಸಾಧ್ಯವಾದರೆ ಈ ವಿಡಿಯೋದಿಂದ ಪಿಎಂ ಸಿಎಂ ತೆಗೆದು ಹಾಕಿ. ನಾನು ನಿಮ್ಮ ಕುಟುಂಬ ಸದಸ್ಯ ಎಂದುಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!