October 10, 2026
Saturday, October 10, 2026
spot_img

ನಾನು ಸತ್ತಿಲ್ಲ ಕಣ್ರಯ್ಯ, ಆರೋಗ್ಯವಾಗಿ ಇದ್ದೀನಿ: ಸಾವಿನ ಸುದ್ದಿ ಹಬ್ಬಿಸಿದವರ ಮೇಲೆ ದೊಡ್ಡಣ್ಣ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಳ್ಳಂಬೆಳಗ್ಗೆ ಕಿಡಿಗೇಡಿಗಳು ನಾನು ಸತ್ತೋದೆ ಅನ್ನೋ ಸುದ್ದಿ ಹಬ್ಬಿಸಿದ್ದಾರೆ. ನಾನು ಆರೋಗ್ಯವಾಗಿ ಇದೀನಿ ಎಂದು ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಹೇಳಿದ್ದಾರೆ.

ಬೆಳಗ್ಗೆ ಏಳೋ ಮುಂಚೆನೇ ಯಾರೋ ಅವಿವೇವಿಕಿಗಳು ನಾನು ಸತ್ತುಹೋದೆ ಅಂತ ಸುದ್ದಿ ಹಬ್ಬಿಸಿದಾರೆ. ಅದೆಲ್ಲ ಶುದ್ಧ ಸುಳ್ಳು. ನನ್ನ ಆರೋಗ್ಯ ಚನಾಗಿದೆ, ಬೆಳಗ್ಗೆಯಿಂದ ಪಾಪ ನನ್ನ ಮಕ್ಕಳು, ಮೊಮ್ಮಕ್ಕಳು ಕಾಲ್‌ ಮಾಡ್ತಾನೇ ಇದಾರೆ. ದೇವರ ಆಶೀರ್ವಾದ ಇರೋವರೆಗೂ ಗಟ್ಟಿಯಾಗಿನೇ ಇರ್ತೀನಿ ಎಂದಿದ್ದಾರೆ.

ಬದುಕಿರೋ ಮನುಷ್ಯ ಸತ್ತುಹೋದ ಅಂತ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳನ್ನು ಸುಮ್ಮನೇ ಬಿಡಲ್ಲ. ಅವರನ್ನು ಬೆನ್ನತ್ತಿ ತಕ್ಕ ಶಿಕ್ಷೆ ಕೊಡಿಸುತ್ತೇನೆ ಎಂದು ತಿಳಿಸಿದ್ದಾರೆ.

Must Read