October 14, 2026
Wednesday, October 14, 2026
spot_img

ಅವಳು ಗರ್ಭಿಣಿಯಾಗೋಕೆ ನಾನು ಕಾರಣ ಅಲ್ಲ! ಭಯದಲ್ಲಿ ಆತ್ಮಹತ್ಯೆಗೆ ಶರಣಾದ ಯುವಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಾಲಾ ವಿದ್ಯಾರ್ಥಿನಿಯನ್ನು ಗರ್ಭಿಣಿ ಮಾಡಿದ ಆರೋಪ ಎದುರಿಸುತ್ತಿದ್ದ ರಾಮು ಎಂಬ 27 ವರ್ಷ ವಯಸ್ಸಿನ ಯುವಕ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ.

ಸಾವಿಗೆ ಶರಣಾಗುವುದಕ್ಕೂ ಮುನ್ನ ಯುವಕ ವಾಯ್ಸ್ ನೋಟ್ ರೆಕಾರ್ಡ್ ಮಾಡಿಟ್ಟಿದ್ದು, ತನ್ನ ಮೇಲಿನ ಆರೋಪಗಳೆಲ್ಲ ಸುಳ್ಳು. ಎಲ್ಲದಕ್ಕೂ ಆ ಶಾಲೆಯ ಪಿಟಿ ಮಾಸ್ತರೇ ಕಾರಣ. ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದು ಯಾರಿಂದ ಎಂಬುದನ್ನು ಡಿಎನ್​​ಎ ಟೆಸ್ಟ್ ಮೂಲಕ ಪತ್ತೆಹಚ್ಚಬೇಕು ಎಂದು ಹೇಳಿಕೊಂಡಿದ್ದಾನೆ.

ಆತ್ಮಹತ್ಯೆಗೂ ಮುನ್ನ ವಾಯ್ಸ್ ನೋಟ್ ಮಾಡಿಟ್ಟಿರುವ ಯುವಕ, ವಿದ್ಯಾರ್ಥಿನಿ ಗರ್ಭಿಣಿಯಾಗುವುದಕ್ಕೆ ನಾನು ಕಾರಣ ಅಲ್ಲ. ನನಗೂ ಆಕೆಗೂ ಯಾವುದೇ ಸಂಬಂಧ ಇಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಇದರಿಂದಾಗಿ ನನಗೆ ತಲೆ ಎತ್ತಿ ನಡೆಯಲು ಸಾಧ್ಯವಾಗುತ್ತಿಲ್ಲ, ವೈದ್ಯರು ಬಂದು ಬಾಲಕಿಯ ಆರೋಗ್ಯ ತಪಾಸಣೆ ನಡೆಸಿದ್ದರು. ಆಗ ಬಾಲಕಿ ಗರ್ಭಿಣಿಯಾಗಿರುವುದು ಗೊತ್ತಾಗಿದೆ. ಶಾಲೆಗೆ ಕಳಂಕ ಬರುತ್ತದೆ ಎಂದು ಅಂತ ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾನೆ.

ಮುಂದುವರಿದು, ಹುಡುಗಿಯನ್ನು ಮಾತನಾಡಿಸಿದ್ದಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಶಾಲೆಯ ಪಿಟಿ ಟೀಚರ್ ಇದಕ್ಕೆಲ್ಲಾ ಕಾರಣ. ಅವರು ಹೀಗೆ ಮಾಡಿದ್ದಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಾಯ್ಸ್ ನೋಟ್​ನಲ್ಲಿ ಯುವಕ ಹೇಳಿದ್ದಾನೆ.

Must Read