ನನಗೆ ರಸ್ತೆಯೇ ಬೇಡ: ಹಸಿ ಕಾಂಕ್ರಿಟ್ ಮೇಲೆಯೇ ಮಲಗಿ ಪ್ರತಿಭಟಿಸಿದ ಮಹಿಳೆ!

ಹೊಸದಿಗಂತ ವರದಿ,ಮಂಗಳೂರು:

ಮಂಗಳೂರು ಮಹಾನಗರ ಪಾಲಿಕೆ ವಶದಲ್ಲಿರುವ ಜಾಗದ ರಸ್ತೆಗೆ ಕಾಂಕ್ರೀಟ್ ಅಳವಡಿಸುವ ವೇಳೆ ಮಹಿಳೆಯೊಬ್ಬರು ರಸ್ತೆಯಲ್ಲಿಯೇ ಮಲಗಿ ಕಾಮಗಾರಿಗೆ ಅಡ್ಡಿಪಡಿಸಿದ ಘಟನೆ ನಗರದ ಮಣ್ಣಗುಡ್ಡೆಯಲ್ಲಿ ಮಂಗಳವಾರ ನಡೆದಿದೆ.
ವಾರ್ಡ್ ನಂ.28 ಮಣ್ಣಗುಡ್ಡೆಯ ಸ್ಥಳೀಯ ನಿವಾಸಿ ವೈಲೇಟ್ ಪಿರೇರಾ ‘ನನಗೆ ರಸ್ತೆಯೇ ಬೇಡವೆಂದು ಕಿರುಚಾಡಿ ಹಸಿ ಕಾಂಕ್ರಿಟ್ ಮೇಲೆಯೇ ಮಲಗಿ ಕೆಲಸಕ್ಕೆ ಅಡ್ಡಿಪಡಿಸಿದ್ದರಿಂದ ಸ್ಥಳಕ್ಕೆ ಪೊಲೀಸರನ್ನು ಕರೆಸಬೇಕಾಯಿತು.


ರಸ್ತೆ ಕಾಮಗಾರಿ ನಡೆಯುತ್ತಿರುವ ಈ ಜಾಗ ನನ್ನದು, ಇಲ್ಲಿ ನೀವೇಕೆ ಕಾಂಕ್ರೀಟ್ ಹಾಕುತ್ತಿದ್ದೀರಿ ಎಂದು ಮಹಿಳೆ ರಸ್ತೆಯ ಮೇಲೆ ಮಲಗಿಬಿಟ್ಟಿರು. ಸುಮಾರು 2 ಗಂಟೆಗಳ ಕಾಲ ಹಸಿ ಕಾಂಕ್ರಿಟ್ ಮೇಲೆಯೇ ಮಲಗಿದ್ದ ಮಹಿಳೆಯನ್ನು ಪೊಲೀಸರು ಮನವೊಲಿಸಲು ಹರಸಾಹಸ ಪಡಬೇಕಾಯಿತು. ಪೊಲೀಸರ ಮನವಿಗೂ ಮಣಿಯದ ಈಕೆಯನ್ನು ಕೆಲ ಮಹಿಳಾ ಪೊಲೀಸರೇ ಹೊತ್ತು ಬೇರೆಡೆಗೆ ಸ್ಥಳಾಂತರಿಸಿದರು. ಅಲ್ಲಿಂದ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ನಂತರ ರಸ್ತೆ ಕಾಮಗಾರಿ ಕೆಲಸ ಪ್ರಾರಂಭವಾಗಿದೆ.
ಮಹಾನಗರ ಪಾಲಿಕೆಯಿಂದ ನಡೆಯುತ್ತಿದ್ದ ರಸ್ತೆ ಕಾಂಕ್ರಿಟೀಕರಣದ ವೇಳೆ ಈ ಘಟನೆ ನಡೆದಿದೆ. ಈ ಜಾಗ ಸದ್ಯ ಪಾಲಿಕೆ ಜಾಗವಾಗಿದ್ದು, ಇದಕ್ಕೆ ಯಾರ ಮಾಲಿಕತ್ವವೂ ಇಲ್ಲ ಎಂದು ಪಾಲಿಕೆ ಸ್ಪಷ್ಟಪಡಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!