ಆ ಒಂದು ‌ʼಗುರಿʼ ಈಡೇರಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೇನೆ ಎಂದ ದಿನೇಶ್‌ ಕಾರ್ತಿಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಶನಿವಾರ ನಡೆದ ಐಪಿಎಲ್‌ ನ 27 ನೇ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ವಿಧ್ವಂಸಕ ಬ್ಯಾಟಿಂಗ್ ನಡೆಸಿದ ದಿನೇಶ್‌ ಕಾರ್ತಿಕ್‌ ತಾವು ಮತ್ತೆ ಟೀಂ ಇಂಡಿಯಾದಲ್ಲಿ ಆಡುವ ಮಹತ್ವಾಕಾಂಕ್ಷೆಯನ್ನು ಬಿಚ್ಚಿಟ್ಟಿದ್ದಾರೆ.
ಭಾರತ ಕ್ರಿಕೆಟ್‌ ತಂಡದ ಭಾಗವಾಗಲು ನಾನು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇನೆʼ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ದಿನೇಶ್‌ ಕಾರ್ತಿಕ್‌ ಪ್ರಸ್ತುತ ತಮ್ಮ ವೃತ್ತಿಜೀವನದಲ್ಲಿಯೇ ಅತ್ಯುತ್ತಮ ಫಾರ್ಮ್‌ ನಲ್ಲಿದ್ದಾರೆ. ವಾಖೆಂಡೆ ಮೈದಾನದಲ್ಲಿ ಡೆಲ್ಲಿ ವಿರುದ್ಧ ಕೇವಲ 34 ಎಸೆತಗಳಲ್ಲಿ 66 ರನ್ ಗಳಿಸುವುದರೊಂದಿಗೆ ಅವರು ಆರ್ಸಿಬಿಗೆ ಜಯ ತಂದುಕೊಟ್ಟರು. ಅರ್ಹವಾಗಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಭಾಜನರಾದರು.
ಪ್ರದಾನ ಸಮಾರಂಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ದೊಡ್ಡ ಗುರಿಯೊಂದಿಗೆ ಹೋರಾಡುತ್ತಿದ್ದೇನೆ. ನಾನು ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ. ದೇಶಕ್ಕಾಗಿ ಏನಾದರೂ ವಿಶೇಷವಾದದ್ದನ್ನು ಮಾಡಬೇಕೆಂಬುದು ನನ್ನ ಗುರಿಯಾಗಿದೆ. ಇದು ನನ್ನ ಪ್ರಯಾಣದ ಭಾಗವಾಗಿದೆ. ನಾನು ಭಾರತ ತಂಡದ ಭಾಗವಾಗಲು ಎಲ್ಲವನ್ನೂ ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ.
2004 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದ 36 ವರ್ಷದ ಕಾರ್ತಿಕ್ ವೃತ್ತಿಜೀವನದಲ್ಲಿ ಹಲವಾರು ಏರಿಳಿತಗಳನ್ನು ಕಂಡಿದ್ದಾರೆ. ಭಾರತ ತಂಡಕ್ಕೆ ಹಲವಾರು ಬಾರಿ ಕಂಬ್ಯಾಕ್‌ ಮಾಡಿದರೂ ತಂಡಲ್ಲಿ ಸ್ಥಿರವಾಗಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ನಿರ್ಗಮನದಿಂದ ಆರ್ಸಿಬಿ ತಂಡದಲ್ಲಿ ಉಂಟಾದ ಶೂನ್ಯವನ್ನು‌ ಕಾರ್ತಿಕ್ ತಮ್ಮ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನದ ಮೂಲಕ ತುಂಬಿದ್ದಾರೆ.
ಮುಂಬರುವ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಕಾರ್ತಿಕ್ ಆಯ್ಕೆಯಾಗುವ ಎಲ್ಲಾ ಸಾಧ್ಯತೆಗಳಿವೆ.
ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಕಾರ್ತಿಕ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 190 ರನ್ ಗಳಿಸಲು ನಿಮಗೆ ವಿಶೇಷ ಇನ್ನಿಂಗ್ಸ್ ಅಗತ್ಯವಿತ್ತು. ಆ ಕ್ರೆಡಿಟ್ ಶಹಬಾಜ್ ಮತ್ತು ಡಿಕೆ ಅವರಿಗೆ ಸಲ್ಲುತ್ತದೆ. ಈ ಸಮಯದಲ್ಲಿ ಡಿಕೆ ಅವರು ಆಡುತ್ತಿರುವ ರೀತಿ ಅದ್ಭುತವಾಗಿದೆ. ಅವರು ತುಂಬಾ ಸ್ಪಷ್ಟ, ಶಾಂತ ಮತ್ತು ಸಮಯೋಚಿತ ಆಟವನ್ನಾಡುತ್ತಿದ್ದಾರೆ ಎಂದು ಡು ಪ್ಲೆಸಿಸ್ ಹೇಳಿದರು.
ಕಾರ್ತಿಕ್ ಡೆಲ್ಲಿ ಬೌಲರ್ ಮುಸ್ತಫಿಜುರ್ ರೆಹಮಾನ್ ವಿರುದ್ಧ ವಿಧ್ವಂಸಕ ಅತ್ಯುತ್ತಮ ಆಟವಾಡಿದರು. 18 ನೇ ಓವರ್‌ನಲ್ಲಿ ನಲ್ಲಿ ಎಡಗೈ ವೇಗಿ ವಿರುದ್ಧ 28 ರನ್‌ ಕಲೆಹಾಕಿದರು. ಇದು ಆರ್ಸಿಬಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!