Saturday, April 1, 2023

Latest Posts

ಅತಿಯಾಗಿ ಫೋನ್ ನೋಡಿದ್ದಕ್ಕೆ ಒಂದೂವರೆ ವರ್ಷ ಕಣ್ಣೇ ಕಾಣಿಸಿಲ್ಲ! ಇದ್ಯಾವ ಸಿಂಡ್ರೋಮ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಕ್ಕಾಪಟ್ಟೆ ಫೋನ್ ಬಳಸುತ್ತಿದ್ದ ಮಹಿಳೆಗೆ ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್ ಸಮಸ್ಯೆ ಕಾಡಿದ್ದು, ಬರೋಬ್ಬರಿ ಒಂದೂವರೆ ವರ್ಷ ಕುರುಡುತನ ಕಾಡಿದೆ.

ಹೈದರಾಬಾದ್‌ನ ಮಹಿಳೆ ಮಂಜು ಬ್ಯೂಟಿಶಿಯನ್ ಆಗಿದ್ದವರು. ವಿಶೇಷ ಸಾಮರ್ಥ್ಯವುಳ್ಳ ಮಗುವನ್ನು ನೋಡಿಕೊಳ್ಳಲು ತಮ್ಮ ಕೆಲಸ ಬಿಟ್ಟು ಬಂದ ಮಂಜು ಅತಿಯಾಗಿ ಫೋನ್‌ನಲ್ಲಿ ಮುಳುಗಿದ್ದರು.

ಹಗಲು ಮಗುವಿಗೆ ರೈಮ್ಸ್, ಹಾಡುಗಳು ಹಾಕಿ ತಾನೂ ನೋಡುತ್ತಿದ್ದು, ರಾತ್ರಿ ಕತ್ತಲಿನಲ್ಲಿ ಗಂಟೆಗಟ್ಟಲೆ ಮೊಬೈಲ್ ನೋಡುತ್ತಿದ್ದರು. ಮನೆಯಲ್ಲಿ ಬೋರಾಗುತ್ತದೆ, ಮಗು ಮಲಗಿದರೆ ಬೇರೆ ಕೆಲಸ ಇಲ್ಲ ಎಂದು ಮೊಬೈಲ್ ಗೀಳು ಹಿಡಿಸಿಕೊಂಡಿದ್ದರು. ಅತಿಯಾಗಿ ಫೋನ್ ಬಳಸಿ ಡಿಜಿಟಲ್ ವಿಶನ್ ಸಿಂಡ್ರೋಮ್ ತಗುಲಿದೆ.

18 ತಿಂಗಳು ದೃಷ್ಟಿಹೀನತೆ ಅನುಭವಿಸಿ ತದನಂತರ ಮಂಜು ಕಣ್ಣುಗಳು ಯಥಾಸ್ಥಿತಿಗೆ ಬಂದಿವೆ, ಇನ್ನೆಂದೂ ಹೆಚ್ಚು ಮೊಬೈಲ್ ನೋಡೋದಿಲ್ಲ ಎಂದು ಮಂಜು ವೈದ್ಯರಿಗೆ ತಿಳಿಸಿದ್ದಾರೆ.

ಲಕ್ಷಣಗಳೇನು?
ಕಣ್ಣು ಯಾವಾಗಲೂ ಡ್ರೈ ಎನಿಸುವುದು
ತಲೆನೋವು, ಮೈಗ್ರೇನ್ ಬರುವುದು
ಕುತ್ತಿಗೆ ಹಾಗೂ ಭುಜ ನೋವು
ಬ್ಲರ್ ಆಗಿ ಕಾಣುವುದು

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!