Monday, January 30, 2023

Latest Posts

‘ಐ ಲವ್​ ಯೂ ಪೆಪ್ಸಿ’ ಎಂದ ರಾಕಿ ಬಾಯ್‌: ಪಾನೀಯ ಕಂಪನಿಗೆ ಯಶ್‌ ರಾಯಭಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕೆಜಿಎಫ್‌ ಸಿನೆಮಾದ ಮೂಲಕ ಹೆಚ್ಚು ಮನೆಮಾತಾಗಿರುವ ನಟ ಯಶ್‌ ಈಗ ಮತ್ತೊಂದು ಸುದ್ದಿಯಿಂದ ಹುಬ್ಬೇರಿಸುವಂತೆ ಮಾಡಿದ್ದಾರೆ.

ಬಹುಬೇಡಿಕೆಯ ನಟ ಯಶ್‌ ಎಲ್ಲೇ ಹೋದರೂ, ಏನೇ ಮಾತಾಡಿದ್ರೂ ಕೂಡ ಸುದ್ದಿಯಾಗ್ತಾರೆ. ಹೀಗಿರುವಾಗ ಪ್ರಸಿದ್ದ ಪಾನೀಯ ಕಂಪನಿಗೆ ಯಶ್‌ ರಾಯಭಾಗಿಯಾಗಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ ನಲ್ಲಿ ಸ್ವತಃ ಅವರೇ ದೃಢಪಡಿಸಿದ್ದಾರೆ. ಪೆಪ್ಸಿ ಕುಡಿಯುತ್ತಿರುವ ವಿಡಿಯೋ ಹಂಚಿಕೊಂಡಿರುವ ಯಶ್​, ‘ಅಭಿನಂದನೆಗಳು ಪೆಪ್ಸಿ. ಐ ಲವ್​ ಯೂ’ ಎಂದು ಹೇಳಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಯಶ್‌ ಸ್ಟೈಲ್‌ ಅನ್ನು ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ ಜೊತೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!