October 9, 2026
Friday, October 9, 2026
spot_img

ಬದುಕುವುದಿಲ್ಲ ಅಂದುಕೊಂಡೆ… ಗೋಡೆ ಮೇಲೆಯೇ ಕುಸಿಯಲಿವೆ ಅನಿಸಿತು… ವೆರೋನಿಕಾ ಕಂಡ ವೆನೆಜುವೆಲಾದ ಕರಾಳ ಕ್ಷಣ

ಹೊಸದಿಗಂತ ಡಿಜಿಟಲ್ ಡೆಸ್ಕ್:


‘ನಾನು ಸಾಯುತ್ತೇನೆ ಎಂದೇ ಭಾವಿಸಿದ್ದೆ… ನಮ್ಮ ಅಪಾರ್ಟ್‌ಮೆಂಟ್‌ನ ಗೋಡೆಗಳು ನನ್ನ ಮೇಲೆಯೇ ಕುಸಿಯಲಿವೆ ಎಂದು ಅನಿಸಿತು…’


ವೆನೆಜುವೆಲಾದಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ ರಾಜಧಾನಿ ಕಾರಕಾಸ್‌ನಲ್ಲಿ ವಾಸಿಸುವ ವೆರೋನಿಕಾ ಎಂಬ ಮಹಿಳೆ.


ಸುದ್ದಿ ಮಾಧ್ಯಮಗಳಿಗೆ ಕರಾಳ ಘಟನೆ ಹಂಚಿಕೊಂಡ ಅವರು, ರಜಾದಿನದ ಹಿನ್ನೆಲೆಯಲ್ಲಿ ತಾಯಿಯೊಂದಿಗೆ ಮನೆಯಲ್ಲಿ ಇದ್ದ ವೇಳೆ ಸಂಜೆ ಸುಮಾರು 6 ಗಂಟೆ ಸುಮಾರಿಗೆ ಭೂಮಿ ನಡುಗಲು ಆರಂಭಿಸಿತು. ಕೆಲವೇ ಸೆಕೆಂಡುಗಳ ಅಂತರದಲ್ಲಿ ಎರಡು ಭೂಕಂಪಗಳು ಸಂಭವಿಸಿದ್ದರಿಂದ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿಬಂದರು. ಭೂಕಂಪದ ಬಳಿಕ ಕಾರಕಾಸ್ ನಗರದ ಹಲವು ಪ್ರದೇಶಗಳಲ್ಲಿ ಕಟ್ಟಡಗಳು ಕುಸಿದಿದ್ದು, ರಸ್ತೆಗಳೆಲ್ಲಾ ಅವಶೇಷಗಳಿಂದ ತುಂಬಿವೆ. ರಕ್ಷಣಾ ಸಿಬ್ಬಂದಿ ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದು, ಕೆಲವು ವಿಡಿಯೊಗಳಲ್ಲಿ ಸಹಾಯಕ್ಕಾಗಿ ಜನರು ಕೂಗುತ್ತಿರುವ ದೃಶ್ಯಗಳು ಕೇಳಿಬರುತ್ತಿವೆ ಎಂದು ಅಲ್ಲಿನ ಸ್ಥಿತಿಗತಿ ಬಿಚ್ಚಿಟ್ಟಿದ್ದಾರೆ.


ಎರಡು ಭೂಕಂಪನಗಳು ಈಗ ದೇಶವನ್ನೇ ತಲ್ಲಣಗೊಳಿಸಿವೆ. ಮೊದಲಿಗೆ 7.2 ತೀವ್ರತೆ, ಕೆಲವೇ ಕ್ಷಣಗಳ ಬಳಿಕ ಮತ್ತೆ 7.5 ತೀವ್ರತೆಯ ಮತ್ತೊಂದು ಭೂಕಂಪ ಅಪ್ಪಳಿಸಿ ಇದುವರೆಗೆ ಅಲ್ಲಿ 16೪ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Must Read