ಹೊಸದಿಗಂತ ವರದಿ, ಶಿವಮೊಗ್ಗ:
ಸಿದ್ದರಾಮಯ್ಯ ನಮ್ಮ ನಾಯಕ, ಈ ರಾಜ್ಯಕ್ಕೆ ಅನ್ನದಾತ ಎಂದು ಹೀಗೆ ಅಂದಿದ್ದು ಬೇರೆ ಯಾರು ಅಲ್ಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar).
ಹೌದು, ಚಾಮರಾಜನಗರ (Chamarajanagar) ಜಿಲ್ಲೆ ಹನೂರು ತಾಲೂಕಿನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯಕ್ಕೆ ಸೇವೆ ಮಾಡಿದ ಸಿದ್ದರಾಮಯ್ಯ ಅವರನ್ನ ಒಬ್ಬ ಮಂತ್ರಿ ಕೊಲೆ ಮಾಡಿ ಅಂತಾ ಹೇಳ್ತಿದ್ದಾರೆ. ಆ ಮಂತ್ರಿಯನ್ನ ಸರ್ಕಾರ ಇನ್ನೂ ಬಂಧಿಸಿಲ್ಲ. ಬೇರೆ ಯಾರಾದ್ರೂ ಅಂದಿದ್ರೆ ಸುಮ್ಮನೆ ಬಿಡ್ತಿದ್ರಾ? ಕೊಲೆ ಮಾಡಿ ಎಂದ ಮಂತ್ರಿನಾ ಕ್ಷಮಿಸಬೇಕಾ ಅಂತಾ ಪ್ರಶ್ನಿಸಿದ್ದಾರೆ.
ಸರ್ಕಾರದಲ್ಲಿ ಹೋಮ್ ಮಿನಿಸ್ಟರ್, ಚೀಫ್ ಮಿನಿಸ್ಟರ್, ಮುಖ್ಯ ಕಾರ್ಯದರ್ಶಿ, ಡಿಜಿಪಿ ಏನ್ ಮಾಡ್ತಿದ್ದಾರೆ. ಆತನನ್ನ ಮಂತ್ರಿ ಸ್ಥಾನದಿಂದ ವಜಾ ಮಾಡಿ ಅಂತಾ ನಾನು ಹೇಳಲ್ಲ. ಆದ್ರೆ ಈ ನೆಲದ ಕಾನೂನು ಪಾಲಿಸಿ ಅಂತಾ ಒತ್ತಾಯಿಸುತ್ತೇನೆ. ಆತ ಎಲ್ಲಿ ಹೇಳಿದ್ದಾನೋ ಆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇವತ್ತೆ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.