Tuesday, March 28, 2023

Latest Posts

ನಾನು ಮಕ್ಕಳನ್ನು ಹೊಂದಲು ಬಯಸುತ್ತೇನೆ: ರಾಹುಲ್ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ರಾಜಕೀಯವಲ್ಲದೆ ತಮ್ಮ ವೈಯಕ್ತಿಕ ವಿಚಾರಗಳಿಗೂ ಸುದ್ದಿಯಾಗುತ್ತಾರೆ. ಭಾರತ್ ಜೋಡೋ ಯಾತ್ರೆ ವೇಳೆಯೂ ರಾಗಾಗೆ ಹಲವು ಬಾರಿ ಸಂದರ್ಶನಗಳಲ್ಲಿ ತಮ್ಮ ಮದುವೆ (Marriage) ಕುರಿತು ಮಾತನಾಡಿದ್ದ ಅವರು, ಇದೀಗ ಮಕ್ಕಳನ್ನು (Children) ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಇಟಾಲಿಯನ್ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಕ್ಕಳನ್ನು ಹೊಂದಲು ಬಯಸಿರುವುದನ್ನು ಬಹಿರಂಗಪಡಿಸಿದ್ದಾರೆ. ಮಾತ್ರವಲ್ಲದೇ ತಮ್ಮ ಕುಟುಂಬದ ಸದಸ್ಯರು ಹಾಗೂ ಅವರೊಂದಿಗೆ ಇದ್ದ ಅನ್ಯೋನ್ಯ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ.

52ರ ವಯಸ್ಸಿನಲ್ಲೂ ಏಕೆ ಒಂಟಿಯಾಗಿದ್ದೀರಿ ಎಂದು ಕೇಳಲಾದ ಪ್ರಶ್ನೆಗೆ, ಇದು ನನಗೂ ವಿಚಿತ್ರ ಎನಿಸುತ್ತದೆ. ಇದಕ್ಕೆ ಉತ್ತರ ನನಗೂ ಗೊತ್ತಿಲ್ಲ. ಮಾಡಲು ತುಂಬಾ ಕೆಲಸಗಳಿವೆ. ಆದರೆ ನಾನು ಮಕ್ಕಳನ್ನು ಹೊಂದಲು ಬಯಸುತ್ತೇನೆ ಎಂದಿದ್ದಾರೆ.

ಈ ಹಿಂದೆ ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಸಂದರ್ಶನವೊಂದರಲ್ಲಿ ತಾವು ತಮ್ಮ ಅಜ್ಜಿ ಇಂದಿರಾ ಗಾಂಧಿಯವರಂತಹ ಗುಣಗಳುಳ್ಳ, ಬುದ್ಧಿವಂತ ಹಾಗೂ ಪ್ರೀತಿಯ ಹೆಣ್ಣಿನೊಂದಿಗೆ ಇರಲು ಬಯಸುತ್ತೇನೆ ಎಂದಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!