May 8, 2026
Friday, May 8, 2026
spot_img

ಇವರ ಪಕ್ಕ ನಾನು ಕುತ್ಕೊಳೋದಿಲ್ಲ, ಬೇರೆ ಆಸನ ಕೊಡಿ: ಸ್ಪೀಕರ್​ಗೆ ಪತ್ರ ಬರೆದ ಡಿಎಂಕೆ ಸಂಸದೆ ಕನಿಮೋಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ರಾಜಕೀಯದಲ್ಲಿ ಉಂಟಾದ ಹೊಸ ಬೆಳವಣಿಗೆ ಇದೀಗ ರಾಷ್ಟ್ರ ರಾಜಕಾರಣದಲ್ಲೂ ಪ್ರತಿಧ್ವನಿಸುತ್ತಿದೆ. ಹಲವು ದಶಕಗಳ ಕಾಲ ಜೊತೆಯಾಗಿ ಸಾಗಿದ್ದ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಬಾಂಧವ್ಯಕ್ಕೆ ಬಿರುಕು ಬಿದ್ದಿದ್ದು, ಅದರ ಪರಿಣಾಮ ಸಂಸತ್ತಿನ ಆಸನ ವ್ಯವಸ್ಥೆಯ ಮೇಲೂ ಕಾಣಿಸಿಕೊಳ್ಳುವ ಸಾಧ್ಯತೆ ಮೂಡಿದೆ.

ಕಾಂಗ್ರೆಸ್ ಪಕ್ಷವು ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆಗೆ ಬೆಂಬಲ ಘೋಷಿಸಿದ ಬಳಿಕ ಡಿಎಂಕೆ ಅಸಮಾಧಾನ ವ್ಯಕ್ತಪಡಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಡಿಎಂಕೆ ಸಂಸದೆ ಕನಿಮೋಳಿ, ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಸಮೀಪ ಕುಳಿತುಕೊಳ್ಳುವುದು ಸೂಕ್ತವಲ್ಲ ಎಂದು ಸ್ಪೀಕರ್‌ಗೆ ಪತ್ರ ಬರೆದು ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:

ತಮಿಳುನಾಡು ಚುನಾವಣೆಯಲ್ಲಿ ಸ್ಪಷ್ಟ ಬಹುಮತದ ಅಂಚಿನಲ್ಲಿ ನಿಂತ ಟಿವಿಕೆಗೆ ಸರ್ಕಾರ ರಚನೆಗೆ ಹೆಚ್ಚುವರಿ ಬೆಂಬಲದ ಅಗತ್ಯವಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ನಿಲುವು ಬದಲಿಸಿ ಬೆಂಬಲ ನೀಡಿದ್ದು, ಡಿಎಂಕೆ ರಾಜಕೀಯವಾಗಿ ದೂರ ಸರಿಯುವ ನಿರ್ಧಾರಕ್ಕೆ ಕಾರಣವಾಗಿದೆ.

ಈ ಬೆಳವಣಿಗೆ ಕೇವಲ ರಾಜ್ಯ ರಾಜಕಾರಣಕ್ಕೆ ಸೀಮಿತವಾಗದೇ, ವಿರೋಧ ಪಕ್ಷಗಳ ಒಗ್ಗಟ್ಟಿನ ಮೇಲೂ ಪ್ರಶ್ನೆ ಎಬ್ಬಿಸಿದೆ. ಸಂಸತ್ತಿನಲ್ಲಿ ಡಿಎಂಕೆ ಪ್ರತ್ಯೇಕ ಬಣವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಮುಂದಿನ ರಾಜಕೀಯ ಲೆಕ್ಕಾಚಾರಗಳಿಗೆ ಇದು ಹೊಸ ತಿರುವು ನೀಡುವ ಸೂಚನೆ ಕಾಣುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !