Tuesday, March 28, 2023

Latest Posts

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಗೆ ಡೇಟ್ ಫಿಕ್ಸ್: ಯಾರಿಗಿದೆ ಎಂಟ್ರಿ ಚಾನ್ಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ 2023 ರ ಫೈನಲ್ ಗೆ ದಿನಾಂಕವನ್ನು ಘೋಷಣೆಯಾಗಿದ್ದು, ಜೂನ್​ 7 ರಿಂದಪಂದ್ಯವು ಶುರುವಾಗಲಿದ್ದು, ಜೂನ್ 11 ರವರೆಗೆ ನಡೆಯಲಿದೆ ಎಂದು ಐಸಿಸಿ ತಿಳಿಸಿದೆ.

ಪ್ರತಿಕೂಲ ಹವಾಮಾನದಿಂದ ದಿನದಾಟವನ್ನು ಮುಂದೂಡಿದರೆ ಜೂನ್ 12 ಅನ್ನು ಮೀಸಲು ದಿನವಾಗಿ ಆಯ್ಕೆ ಮಾಡಲಾಗಿದೆ. ಅದರಂತೆ ಇಂಗ್ಲೆಂಡ್​ನ ಓವಲ್ ಮೈದಾನದಲ್ಲಿ ಜೂನ್ 7 ರಿಂದ 11 ರವರೆಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ನಡೆಯಲಿದೆ.

ಇನ್ನು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ನಲ್ಲಿ ಯಾವ ಯಾವ ತಂಡ ಇರಲಿದೆ ಎಂದು ಇನ್ನು ನ್ ನಿರ್ಧಾರವಾಗಿಲ್ಲ.ಆದ್ರೂ ಆಸ್ಟ್ರೇಲಿಯಾ ತಂಡವು ಫೈನಲ್ ಆಡುವುದು ಖಚಿತವಾಗಿದೆ. ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಪಾಯಿಂಟ್ ಟೇಬಲ್​​ನಲ್ಲಿ ಆಸೀಸ್ ಪಡೆಯು ಅಗ್ರಸ್ಥಾನದಲ್ಲಿದೆ. ಹೀಗಾಗಿ ಫೈನಲ್ ಕಣಕ್ಕಿಳಿಯುವುದು ಕನ್ಫರ್ಮ್ ಆಗಿದೆ. ಆದರೆ ಮತ್ತೊಂದೆಡೆ ಫೈನಲ್​ ಪ್ರವೇಶಿಸಲು ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.

ಟೀಮ್ ಇಂಡಿಯಾ ಫೆಬ್ರವರಿ 9 ರಿಂದ ಶುರುವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಥವಾ 3-1 ಅಥವಾ 2-0 ಅಂತರದಿಂದ ಗೆದ್ದುಕೊಂಡರೆ ನೇರವಾಗಿ ಫೈನಲ್​ ಪ್ರವೇಶಿಸಬಹುದು.

ಒಂದು ವೇಳೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತರೆ ಮಾತ್ರ ಶ್ರೀಲಂಕಾಗೆ ಅವಕಾಶ ಇರಲಿದೆ. ಇಲ್ಲಿ ಸೋಲುವ ಲೆಕ್ಕಚಾರ ಕೂಡ ಗಣನೆಗೆ ಬರಲಿದೆ. ಅಂದರೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 3-1 ಅಥವಾ, 2-0, 1-0 ಸರಣಿ ಅಂತರದಿಂದ ಸೋತರೆ ಶ್ರೀಲಂಕಾ ತಂಡಕ್ಕೆ ಫೈನಲ್​ಗೇರುವ ಅವಕಾಶ ಹೆಚ್ಚಾಗಲಿದೆ.

ಅಂದರೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತರೆ ಶ್ರೀಲಂಕಾ ತಂಡವು ನ್ಯೂಜಿಲೆಂಡ್ ವಿರುದ್ಧ ಸರಣಿಯನ್ನು ಗೆಲ್ಲಬೇಕು. ಇಲ್ಲಿ ಲಂಕಾ ತಂಡವು ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡರೆ ಮಾತ್ರ ನೇರವಾಗಿ ಫೈನಲ್​ಗೆ ಪ್ರವೇಶಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!