ಫೆಬ್ರವರಿ 10 ರಿಂದ ರಾಜ್ಯ ಬಜೆಟ್​ ಅಧಿವೇಶನ: ವಿಧಾನಸೌಧ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ವಿಧಾನ ಸೌಧದಲ್ಲಿ ಬಜೆಟ್​ ಅಧಿವೇಶನ ಫೆಬ್ರವರಿ 10 ರಿಂದ 24 ರವರೆಗೆನಡೆಯಲಿದ್ದು, ಈ ವೇಳೆ ಕಾರ್ಯಕಲಾಪಗಳಿಗೆ ಅಡಚಣೆ, ಸಾರ್ವಜನಿಕ ನೆಮ್ಮದಿಗೆ ಭಂಗ, ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಹೆಚ್. ಪ್ರತಾಪ್ ರೆಡ್ಡಿಯವರು ಐಪಿಸಿ ಸೆಕ್ಷನ್ 144 ರ ಪ್ರಕಾರ ಪ್ರತಿಬಂಧಕಾಜ್ಞೆ ಜಾರಿಮಾಡಿ ಆದೇಶಿಸಿದ್ದಾರೆ.

ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 12 ರ ವರೆಗೆ ವಿಧಾನಸೌಧದ ಸುತ್ತಲೂ 2 ಕಿ.ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ 5 ಕ್ಕಿಂತ ಹೆಚ್ಚು ಜನ ಒಂದೆಡೆ ಗುಂಪು ಸೇರುವಂತಿಲ್ಲ, ಮೆರವಣಿಗೆ, ಪ್ರತಿಭಟನೆ ಹಾಗೂ ಮಾರಕಾಸ್ತ್ರಗಳು, ಕಲ್ಲು, ಇಟ್ಟಿಗೆ ದೈಹಿಕ ಹಿಂಸೆ ಉಂಟುಮಾಡುವ ವಸ್ತುಗಳನ್ನ ಒಯ್ಯುವಂತಿಲ್ಲ. ಸ್ಪೋಟಕ ವಸ್ತುಗಳನ್ನ ಸಿಡಿಸುವುದು ಸಂಪೂರ್ಣ ನಿಷೇಧವಾಗಿದ್ದು, ಯಾವುದೇ ಪ್ರತಿಕೃತಿಗಳ ಪ್ರದರ್ಶನ, ದಹನ ಮಾಡುವಂತಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!