ಧ್ವನಿವಧ೯ಕ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಮೇ 9 ರಿಂದ ಹನುಮಾನ್ ಚಾಲಿಸ್ ಪಠಣ: ಆಂದೋಲಾಶ್ರೀ

ಹೊಸದಿಗಂತ ವರದಿ, ಕಲಬುರಗಿ:

ಹೈಕೋರ್ಟ್, ಸೂಪ್ರೀಕೋಟ್ ಆದೇಶವಿದ್ದರೂ,ಸಕಾ೯ರ ಧ್ವನಿವಧ೯ಕಗಳ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ.ಕೂಡಲೇ ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮೇ, 9 ರಿಂದ ಮಸೀಧಿಗಳ ಸುತ್ತ ಮುತ್ತಲಿನ ದೇವಸ್ಥಾನಗಳಲ್ಲಿ ಹನುಮಾನ್ ಚಾಲಿಸ್ ಪಠಣ ಮಾಡಲಾಗುವುದು ಎಂದು ಆಂದೋಲಾ ಕರುಣೆಶ್ವರ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಅವರು ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಮಸೀಧಿಗಳ ಮೇಲಿನ ಆಜಾನ್ ಧ್ವನಿವಧ೯ಕಗಳನ್ನು ಇದುವರೆಗೂ ತೆರವುಗೊಳಿಸಿಲ್ಲ.ಒಂದು ವೇಳೆ ಇದರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಮೇ 9 ರಿಂದ ಆಜಾನ್ ಸೇ ಆಜಾದ್ ಚಳುವಳಿ ಪ್ರಾರಂಭಿಸಿ, ದೇವಸ್ಥಾನಗಳಲ್ಲಿ ಭಜನೆ ಮತ್ತು ಹನುಮಾನ್ ಚಾಲಿಸ್ ಪಠಣ ಮಾಡಲಾಗುವುದು ಎಂದು ಎಚ್ಚರಿಸಿದರು.

ಹೈಕೋರ್ಟ್ ಮತ್ತು ಸೂಪ್ರೀಕೋಟ್ ಆದೇಶ ಮಾಡಿ,ಮಸೀಧಿಗಳ ಧ್ವನಿವಧ೯ಕಗಳಿಂದ ಇಂತಿಷ್ಟು ಶಬ್ದ ಬರಬೇಕೆಂದು ಆದೇಶವಿದೆ. ಇದಾಗ್ಯೂ ಆದೇಶದ ಪಾಲನೆ ಆಗುತ್ತಿಲ್ಲ. ಬರೀ ಮಸೀಧಿಗಳಿಗೆ ಸಕಾ೯ರ ನೋಟಿಸ್ ನೀಡಿದರೇ ಸಾಲದು. ಮಸೀಧಿಗಳ ಸುತ್ತ ಮುತ್ತಲಿನ ಪೋಲಿಸ್ ಠಾಣೆಗಳು ಪರಿಶೀಲನೆ ಮಾಡಬೇಕೆಂಬ ಆದೇಶವಿದೆ ಎಂದರು.

ಆದರೆ ಕೋರ್ಟ್, ಗಳ ಆದೇಶವನ್ನು ಪಾಲನೆ ಮಾಡದೇ ಸಕಾ೯ರ ನಿಂದನೆ ಮಾಡಿದೆ. ಕೂಡಲೇ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಎನಾದರೂ ಅಹಿತಕರ ಘಟನೆಗಳು ನಡೆದರೆ, ಇದಕ್ಕೆ ಸಕಾ೯ರವೆ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!