March 23, 2026
Monday, March 23, 2026
spot_img

ಬಾಂಗ್ಲಾ ಹಿಂದುಗಳು ಹೋರಾಡಲು ನಿರ್ಧರಿಸಿದರೆ ಪ್ರಪಂಚದಿಂದಲೇ ಸಿಗಲಿದೆ ಬೆಂಬಲ: ಮೋಹನ್ ಭಾಗವತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದ ಹಿಂದು ಜನಸಂಖ್ಯೆಯು ತನ್ನ ಹಕ್ಕುಗಳಿಗಾಗಿ ನಿಂತು ಹೋರಾಡಲು ನಿರ್ಧರಿಸಿದರೆ, ಅವರಿಗೆ ಪ್ರಪಂಚದಾದ್ಯಂತ ಹಿಂದುಗಳ ಬೆಂಬಲ ಸಿಗುತ್ತದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ಆರ್‌ಎಸ್‌ಎಸ್ ಉಪನ್ಯಾಸ ಸರಣಿಯ ಎರಡನೇ ದಿನವನ್ನುದ್ದೇಶಿಸಿ ಭಾಗವತ್ ಮಾತನಾಡಿದರು. ವರ್ಲಿಯ ನೆಹರೂ ಕೇಂದ್ರದಲ್ಲಿ ಆರ್‌ಎಸ್‌ಎಸ್ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾದ ‘100 ವರ್ಷಗಳ ಸಂಘ ಪಯಣ: ಹೊಸ ದಿಗಂತಗಳು’ ಎಂಬ ಎರಡು ದಿನಗಳ ವ್ಯಾಖ್ಯಾನಮಾಲಾದಲ್ಲಿ ಭಾಗವತ್ ಮಾತನಾಡಿದ್ದಾರೆ.

ಬಾಂಗ್ಲಾದೇಶದಲ್ಲಿ ಸುಮಾರು 1.25 ಕೋಟಿ ಹಿಂದುಗಳಿದ್ದಾರೆ. ಅಅಲ್ಲಿಯೇ ಇದ್ದು ಹೋರಾಡಲು ನಿರ್ಧರಿಸಿದರೆ, ಪ್ರಪಂಚದಾದ್ಯಂತದ ಎಲ್ಲಾ ಹಿಂದುಗಳು ಅವರಿಗೆ ಖಂಡಿತ ಸಹಾಯ ಮಾಡುತ್ತಾರೆ ಎಂದು ಭಾಗವತ್ ಹೇಳಿದರು.

ಬಾಂಗ್ಲಾದೇಶದಲ್ಲಿ ಹಿಂದು ನಾಗರಿಕರನ್ನು ಗುರಿಯಾಗಿಸಿಕೊಂಡು ಹಿಂಸಾತ್ಮಕ ಗುಂಪುಗಳು ದಾಳಿ ನಡೆಸಿವೆ. ಉದ್ಯಮಿಗಳು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಜನರು ಸಾವನ್ನಪ್ಪಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !