ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಜನಗಣತಿ ಸಮೀಕ್ಷೆ: ರಾಹುಲ್ ಗಾಂಧಿ

ಹೊಸದಿಗಂತ ವರದಿ, ರಾಯಚೂರು :

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಜನಗಣತಿ ಸಮೀಕ್ಷೆಯನ್ನು ಮಾಡೇ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ನಗರದ ಲಾಲ್‌ಕಟ್ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದ ಬಹಿರಂದ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಪ್ರನಾಳಿಕೆಯಲ್ಲಿ ತಿಳಿಸಿದಂತೆ ದೇಶದಲ್ಲಿ ಜಾತಿ ಜನಗಣತಿ ಮಾಡುವ ಮೂಲಕ ದೊಡ್ಡ ಕ್ರಾಂತಿಯನ್ನು ಮಾಡಲಿದೆ. ಇದರಿಂದ ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಕಾರ್ಮಿಕರು ಎಷ್ಟಿದ್ದಾರೆ ಎನ್ನುವುದು ತಿಳಿಯುತ್ತದೆ ಎಂದರು.

ದೇಶದ ಆರ್ಥಿಕತೆಯಲ್ಲಿ ಯಾವ ಸಮುದಾಯದವರು ಎಷ್ಟು ಭಾಗಿತ್ವ ಮತ್ತು ಕೊಡುಗೆಯನ್ನು ನೀಡುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ನಿಮ್ಮ ಶಕ್ತಿ ಎಷದ್ಟು ಎನ್ನುವುದು ತಿಳಿಯುತ್ತದೆ. ಪ್ರಸಕ್ತ ಶೇ.೯೦ ರಷ್ಟು ಜನರಿಗೆ ಯಾವುದೇ ಭಾಗಿತ್ವ ಇಲ್ಲದಂತಾಗಿದೆ. ದೇಶದ ನಿಜವಾದ ರಾಜಕಾರಣ ಆಗ ತಿಳಿಯುತ್ತದೆ ಎಂದು ಹೇಳಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡಿತ್ತು ಆದರೆ ಬಿಜೆಪಿಗೆ ದೇಶದ ಶ್ರೀಮಂತರ ಸಾಲ ಮನ್ನಾ ಮಾಡುವುದಕ್ಕೆ ಬರುತ್ತದೆ ಆದರೆ ರೈತರ ಸಾಲ ಮನ್ನಾ ಮಾಡುವುದಕ್ಕೆ ಮುಂದಾಗಿಲ್ಲ. ದೇಶದ ಅಧಿಕರವನ್ನು ಕೇವಲ ೯೦ ಐಎಎಸ್ ಅಧಿಕಾರಿಗಳು ನಡೆಸುತ್ತಿದ್ದಾರೆ ಇವರಿಗೆಲ್ಲ ದೇಶದ ರೈತರ ಏಳಿಗೆಯ ಯೋಜನೆಗಳನ್ನು ರೂಪಿಸುವುದು ಬೇಕಾಗಿಲ್ಲ ಇವರೇ ಆಯವ್ಯದ ಸಂದರ್ಭದಲ್ಲಿ ಎಲ್ಲ ಯೋಜನೆಗಳಿಗೆ ಹಣವನ್ನು ನಿಗದಿ ಮಾಡುತ್ತಾರೆ ಇಂತಹವರಿoದ ದೇಶದ ಶ್ರಮಿಕರ ಏಳಿಗೆ ಸಾಧ್ಯವೆ ಎಂದು ಪ್ರಶ್ನಿಸಿದರು.

ಮೋದಿ ಸರ್ಕಾರ ಶೇ.೯೦ ಜನರಿಗೆ ಪ್ರಯೋಜನವಾಗುವಂತಹ ಯಾವುದೇ ಯೋಜನೆಗಳನ್ನು ಜಾರಿಗೆ ತಂದಿಲ್ಲ. ನಿರುದ್ಯೋಗ, ರೈತರು, ಕಾರ್ಮಿಕ ವರ್ಗದವರ ಸಂಕಷ್ಟಗಳ ಕುರಿತು ಮಾತನಡುವುದೇ ಇಲ್ಲ ಎಂದರು.

ಪ್ರಸ್ತುತ ಮಾಧ್ಯಮ ಕ್ಷೇತ್ರವೂ ಸಹಿತ ಶ್ರೀಮಂತರ ಕೈಯಲ್ಲಿವೆ. ಈ ಕ್ಷೇತ್ರದಲ್ಲಿ ದಲಿತರಿಲ್ಲ. ಹೀಗಾಗಿ ಅಂಬಾನಿ ಮತ್ತು ಶ್ರೀಮಂತ ವರ್ಗದವರ ಮನೆಯಲ್ಲಿ ಜರಗುವ ಕಾರ್ಯಕ್ರಮಗಳನ್ನು, ಐಪಿಎಲ್ ಸೇರಿದಂತೆ ಬಂಡವಾಳ ಶಾಹಿಗಳ ಕುರಿತಾದ ಕಾರ್ಯಕ್ರಮಗಳನ್ನು ತೋರಿಸುತ್ತವೆ ಹೊರತು ರೈತರ, ಬಡವರ, ಕಾರ್ಮಿಕರಿಗೆ ಸಂಬoಧಿಸಿದ ಕಷ್ಟಗಳ ಕುರಿತು ಹೆಚ್ಚಾಗಿ ತೋರಿಸುವುದಕ್ಕೆ ಮುಂದಾಗುವುದಿಲ್ಲ ಎಂದು ಮಾಧ್ಯಮಗಳ ವಿರುದ್ಧವೂ ವಾಗ್ದಾಳಿ ನಡೆಸಿದರು.

ದೇಶದಲ್ಲಿನ ದೊಡ್ಡ ದೊಡ್ಡ ಉದ್ಯಮಗಳು, ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ವಿಶ್ವ ವಿದ್ಯಾನಿಲಯಗಳು ಸೇರಿದಂತೆ ದೊಡ್ಡ ದೊಡ್ಡ ಬಂಡವಾಳ ಹೂಡಿಕೆಯ ಕ್ಷೇತ್ರಗಳೆಲ್ಲವೂ ಮುಂದುವರೆದ ಜನಾಂಗದ ಕೈಯಲ್ಲಿವೆ. ಇಂತಹ ಕ್ಷೇತ್ರಗಳಲ್ಲಿ ಹಿಂದುಳಿದವರು, ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರಿಲ್ಲ.ದೇಶದ ಜನತೆಯ ಜಿಎಸ್‌ಟಿ ಹಣ, ರೈತರ ಪರಿಶ್ರಮದ ಹಣ ಇಂಹವರ ಜೇಬು ಸೇರುತ್ತಿದೆ. ರೈಲ್ವೆ, ವಿಮಾನು ನಿಲ್ದಾಣ, ಬಂದರು ಸೇರಿದಂತೆ ಇನ್ನು ಅನೇಕ ಉದ್ಯಮಗಳನ್ನು ಖಾಸಗಿಯವರ ಕೈಗೆ ನೀಡುವ ಮೂಲಕ ಯುವ ಜನತೆಗೆ ಉದ್ಯೋಗ ಭದ್ರತೆ ಇಲ್ಲದಂತೆ ಮೋದಿ ಸರ್ಕಾರ ಮಾಡಿದೆ ಎಂದರು.

ವೇದಿಕೆಯಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಕೆ.ಸಿ.ವೇಣುಗೋಪಾಲ, ಕೆ.ಹೆಚ್.ಮುನಿಯಪ್ಪ, ತನ್ವೀರ ಶೇಠ, ವಿನಯಕುಮಾರ ಸೊರಕೆ, ತೇಜಸ್ವಿನಿಗೌಡ, ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, ಬಸನಗೌಡ ತುರ್ವಿಹಾಳ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!