ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆಬಂದರೆ….: ಮಹಿಳೆಯರಿಗೆ ಮತ್ತೊಂದು ಗ್ಯಾರಂಟಿ ಘೋಷಿಸಿದ ರಾಹುಲ್ ಗಾಂಧಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಚುನಾವಣೆಯಲ್ಲಿ (Lok sabha Elections) ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಶೇ 50ರಷ್ಟು ಸರ್ಕಾರಿ ಉದ್ಯೋಗಗಳನ್ನು ಮಹಿಳೆಯರಿಗೆ ಮೀಸಲಿಡುವುದಾಗಿ ರಾಹುಲ್ ಗಾಂಧಿ (Rahul Gandhi) ಶುಕ್ರವಾರ ಭರವಸೆ ನೀಡಿದ್ದಾರೆ.

ಭಾರತದಲ್ಲಿ ಮಹಿಳೆಯರ ಜನಸಂಖ್ಯೆ ಶೇಕಡ 50 ಅಲ್ಲವೇ? ಹೈಯರ್ ಸೆಕೆಂಡರಿ ಮತ್ತು ಉನ್ನತ ಶಿಕ್ಷಣದಲ್ಲಿ (higher education) ಮಹಿಳೆಯರ ಉಪಸ್ಥಿತಿ ಶೇಕಡ 50 ಅಲ್ಲವೇ? ಹಾಗಿದ್ದಲ್ಲಿ, ವ್ಯವಸ್ಥೆಯಲ್ಲಿ ಅವರ ಪಾಲು ಏಕೆ ಕಡಿಮೆ? ‘ಆಧಿ ಆಬಾದಿ ಪೂರಾ ಹಕ್’ (ಅರ್ಧ ಜನಸಂಖ್ಯೆಗೆ ಪೂರ್ತಿ ಹಕ್ಕು) ಎಂದು ಕಾಂಗ್ರೆಸ್ ಬಯಸುತ್ತದೆ. ಸರ್ಕಾರದಲ್ಲಿ ಮಹಿಳೆಯರಿಗೆ ಸಮಾನ ಕೊಡುಗೆ ನೀಡಿದಾಗ ಮಾತ್ರ ಮಹಿಳೆಯರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಎಂದು ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ.

ಅದಕ್ಕಾಗಿ ಎಲ್ಲಾ ಹೊಸ ಸರ್ಕಾರಿ ಉದ್ಯೋಗಗಳಲ್ಲಿ ಅರ್ಧದಷ್ಟು ನೇಮಕಾತಿಗಳನ್ನು ಮಹಿಳೆಯರಿಗೆ ಮೀಸಲಿಡಬೇಕು ಎಂದು ಕಾಂಗ್ರೆಸ್ ನಿರ್ಧರಿಸಿದೆ. ಸಂಸತ್ತಿನಲ್ಲಿ ಮತ್ತು ಅಸೆಂಬ್ಲಿಗಳಲ್ಲಿ ಮಹಿಳಾ ಮೀಸಲಾತಿಯ ತಕ್ಷಣದ ಅನುಷ್ಠಾನದ ಪರವಾಗಿ ನಾವು ಕೂಡ ಇದ್ದೇವೆ ಎಂದು ಹೇಳಿದರು.

ಸುರಕ್ಷಿತ ಆದಾಯ, ಭವಿಷ್ಯ, ಸ್ಥಿರತೆ ಮತ್ತು ಸ್ವಾಭಿಮಾನ ಹೊಂದಿರುವ ಮಹಿಳೆಯರು ನಿಜವಾಗಿಯೂ ಸಮಾಜದ ಶಕ್ತಿಯಾಗುತ್ತಾರೆ. 50 ರಷ್ಟು ಸರ್ಕಾರಿ ಹುದ್ದೆಗಳಲ್ಲಿ ಮಹಿಳೆಯರು ಇರುವುದು ದೇಶದ ಪ್ರತಿಯೊಬ್ಬ ಮಹಿಳೆಗೆ ಶಕ್ತಿ ನೀಡುತ್ತದೆ. ಶಕ್ತಿಯುತ ಮಹಿಳೆಯರು ಭಾರತದ ಭವಿಷ್ಯವನ್ನು ಬದಲಾಯಿಸುತ್ತಾರೆ ಎಂದು ರಾಹುಲ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!