Wednesday, December 7, 2022

Latest Posts

ಬೇಡಿಕೆ ಈಡೇರದಿದ್ದರೆ ಫ್ರೀಡಂ ಪಾರ್ಕ್‌ನಲ್ಲೇ ವಾಲ್ಮೀಕಿ ಜಯಂತಿ ಆಚರಣೆ : ಭೀಮಪ್ಪ ತಳವಾರ್

ಹೊಸದಿಗಂತ ವರದಿ ಬಾಗಲಕೋಟೆ:

ವಾಲ್ಮೀಕಿ ಜನಾಂಗಕ್ಕೆ 7.2 ಮೀಸಲಾತಿ ಹೆಚ್ಚಿಸುವಂತೆ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಶ್ರೀ ಪ್ರಸನ್ನಾನಂದ ಶ್ರೀಗಳು ಸುಮಾರು 230 ದಿನಕ್ಕೂ ಹೆಚ್ಚು ಧರಣಿ ಸತ್ಯಾಗ್ರಹ ನಡೆಸಿದ್ದು ಆದರೂ ಕೂಡ ಸಮುದಾಯಕ್ಕೆ ನ್ಯಾಯ ದೊರಕಿಲ್ಲ ಆಗಸ್ಟ್ 8 ರ ಒಳಗೆ ನಮ್ಮ ಬೇಡಿಕೆ ಈಡೇರಿಸುವುದಾಗಿ ಸಿ.ಎಂ .ಭರವಸೆ ನೀಡಿದ್ದು ಒಂದು ವೇಳೆ ಆಗದಿದ್ದಲ್ಲಿ ಆಗಸ್ಟ್ 9 ರಂದು ರಾಜ್ಯಾದ್ಯಂತ ವಾಲ್ಮೀಕಿ ಜಯಂತಿಯನ್ನು ತಿರಸ್ಕರಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಶ್ರೀಗಳ ನೇತೃತ್ವದಲ್ಲಿ ಆಚರಿಸಿ ಧರಣಿ ಮುಂದುವರೆಸುವಂತೆ ಇಲ್ಲಿನ ವಾಲ್ಮೀಕಿ ಸಮಾಜದ ಅಧ್ಯಕ್ಷ ಭೀಮಪ್ಪ ತಳವಾರ್ ಹೇಳಿದರು.
ನಗರದ ಕಾನಿಪ ಕಾರ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡುತ್ತಿದ್ದರು ಸರಕಾರ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಹಲಗಲಿ ಗ್ರಾಮದಿಂದ ತಾಲೂಕಿನ ಸರಿಸುಮಾರು 2500 ರಕ್ಕೂ ಹೆಚ್ಚು ಜನರು ಬೆಂಗಳೂರಿಗೆ ಹೋಗಲು ನಿರ್ಧರಿಸಲಾಗಿದೆ ಆಗಸ್ಟ್ 9 ಫ್ರೀಡಂ ಪಾರ್ಕಿನಲ್ಲಿ ಶ್ರೀಗಳ ನೇತೃತ್ವದಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಿಸಿ ನಮ್ಮ ಬೇಡಿಕೆ 7.2 ಮೀಸಲಾತಿ ಗಾಗಿ ಹೋರಾಟ ನಡೆಸುವುದಾಗಿ ತಿಳಿಸಿದರು
ಈ ಸಂದರ್ಭದಲ್ಲಿ ಸುಭಾಷ್ ಗಸ್ತಿ ,ಶಿವಪ್ಪ ಡೊಳ್ಳಿ, ಲಕ್ಷ್ಮಣ ಮಾಲಗಿ,ಗೋವಿಂದ ಕೌಲಗಿ, ದುರ್ಗಪ್ಪ ಗಸ್ತಿ ,ಮಂಜುನಾಥ್ ಗಸ್ತಿ ,ಅಡಿವೆಪ್ಪ ತಳವಾರ್, ಯಮನಪ್ಪ ಪೂಜಾರಿ ಸೇರಿದಂತೆ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!