Wednesday, June 7, 2023

Latest Posts

ಜೆಡಿಎಸ್ ಗೆ ಪೂರ್ಣ ಬಹುಮತ ನೀಡಿದರೆ ರೈತನ ಆಡಳಿತ ಹೇಗಿರುತ್ತೆ ತೋರಿಸುವೆ: ಹೆಚ್.ಡಿ.ಕುಮಾರಸ್ವಾಮಿ

ಹೊಸದಿಗಂತ ವರದಿ,ತುಮಕೂರು:

ಮುಂಬರುವ ವಿಧಾನ ಸಭಾಚುನಾವಣೆಯಲ್ಲಿ ತಮಗೆ ಮತದಾರರು ಪೂರ್ಣ ಬಹುಮತ ನೀಡಿದರೆ ರೈತನ ಆಡಳಿತ ಯಾವರೀತಿ ಇರುತ್ತದೆ ಎಂಬುದನ್ನು ತೋರಿಸುತ್ತೇನೆ ಎಂದು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು
ಮಧುಗಿರಿ ಜೆಡಿಎಸ್ ಅಭ್ಯರ್ಥಿ ಶಾಸಕ ಎಂ.ವಿ.ವೀರಭದ್ರಯ್ಯ ಅವರ ಪರವಾಗಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು.
ರಾಜ್ಯದ ಜನತೆ ಈ ಬಾರಿ ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಲಿದ್ದಾರೆ.ತಾವು ಆಗ ರೈತನ ಮಗನ ಆಡಳಿತ ಹೇಗಿರುತ್ತದೆ ಎಂಬುದನ್ನು ತೋರಿಸುವೆ ಎಂದರು.
ಮಹಿಳೆಯರು,ರೈತರ ಬದುಕನ್ನು ಹಸನು ಮಾಡುವೆ,ವರ್ಷಕ್ಕೆ ಐದು ಅಡುಗೆ ಅನಿಲದ ಸಿಲಿಂಡರ್ ಗಳನ್ನು ಉಚಿತವಾಗಿ ನೀಡುವೆ,ವಿದ್ಯಾರ್ಥಿಗಳಿಗೆ ಉಚಿತ ದ್ವಿಚಕ್ರ ವಾಹನ ನೀಡುವೆ ಎಂಬ ಭರವಸೆ ನೀಡಿದರು.
ಹದಿನಾಲ್ಕು ತಿಂಗಳ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ಸಿನವರು ಕಡಬಾರದಷ್ಟು ಕಿರುಕುಳ ಕೊಟ್ಟರು,ರೈತರ ಸಾಲ ಮನ್ನಾ ಮಾಡಲು ಅಡ್ಡಿ ಮಾಡಿದರೂ,ಆದರೂ 26ಲಕ್ಷ ರೈತರ 25 ಸಾವಿರ ಕೋಟಿ ರೂಗಳ ಸಾಲ ಮನ್ನಾ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ತುಮಕೂರು ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದರು.ಮಧುಗಿರಿ ಅಭ್ಯರ್ಥಿ ವೀರಭದ್ರಪ್ಪ ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!