ಕೊಟ್ಟ ಭರವಸೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಮತ ಕೇಳಲು ಬರಲ್ಲ: ಕುಮಾರಸ್ವಾಮಿ

ಹೊಸದಿಗಂತ ವರದಿ,ಮಳವಳ್ಳಿ:

ಐದು ವರ್ಷ ಸ್ವತಂತ್ರವಾಗಿ ನಿಜವಾದ ಮಣ್ಣಿನ ಮಕ್ಕಳ ಪಕ್ಷವಾದ ಜಾತ್ಯಾತೀತ ಜನತಾದಳಕ್ಕೆ ಅಧಿಕಾರ ಕೊಟ್ಟರೇ ಪಂಚರತ್ನ ಯೋಜನೆಯನ್ನು ಅನುಷ್ಠಾನಗೊಳಿಸುತ್ತೇನೆ, ಕೊಟ್ಟ ಭರವಸೆಯನ್ನು ಈಡೇರಿಸದಿದ್ದರೇ ಮುಂದಿನ ದಿನಗಳಲ್ಲಿ ಮತ ಕೇಳಿಯುವುದಕ್ಕೆ ಬರುವುದಿಲ್ಲವೆಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.
ಹಲಗೂರಿನಿಂದ ಪಟ್ಟಣದ ಅನತ್ರಾಂ ವೃತ್ತಕ್ಕೆ ಪಂಚಯಾತ್ರೆ ಆಗಮಿಸಿದ ಸಂದರ್ಭದಲ್ಲಿ ಹೆಲಿಕಾಪ್ಟರ್ ಮೂಲಕ ಹೂಮಳೆ ಸುರಿಸಿ ಅಭಿನಂದಿಸಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತನಗೆ 2 ಬಾರಿ ಹೃದಯ ಶಸ್ತ ಚಿಕಿತ್ಸೆಗೆ ಒಳಗಾಗಿದ್ದರೂ ಕೂಡ ಬಡವರಿಗೆ ಅನುಕೂಲವಾಗಬೇಕು, ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು, ಎಲ್ಲಾ ರೀತಿಯ ಆರೋಗ್ಯ ಸೌಲಭ್ಯಗಳು ದೊರೆಯಬೇಕು, ಯುವಕರಿಗೆ ಉದ್ಯೋಗ ನೀಡುವಂತಾಗಬೇಕು, ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕೆಂಬ ಉದ್ದೇಶದಿಂದ ಪಂಚರತ್ನ ಯಾತ್ರೆಯನ್ನು ಆರಂಭಿಸಲಾಗಿದ್ದು, ಸ್ವತಂತ್ರವಾಗಿ ಅಧಿಕಾರ ಕೊಟ್ಟರೇ ಪಂಚರತ್ನ ಯೋಜನೆ ಜೊತೆಗೆ ಎಲ್ಲಾ ಸ್ತಿಥಶಕ್ತಿ ಸಂಘಗಳ ಸಾಲ ಮನ್ನಾ ಮಡಲಾಗುವುದು, 65 ವರ್ಷ ಮೇಲ್ಪಟ್ಟ ವೃದ್ದರಿಗೆ 5ಸಾವಿರ ವೃದ್ದಪ್ಯವೇತನ, ಅಂಗವಿಕಲರಿಗೆ ಎರಡುವರೆ ಸಾವಿರ ವೇತನ ಸೇರಿದಂತೆ ಸಂರ್ಪೂಣ ನೀರಾವರಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.
1996ರಲ್ಲಿ ಕನಕಪುರ ಲೋಕಸಭಾ ಚುನಾವಣೆಯಲ್ಲಿ ತನಗೆ ಮಳವಳ್ಳಿಯಿಂದ 10 ಸಾವಿರ ಮತ ಲೀಡ್ ನೀಡುವುದರ ಮೂಲಕ ರಾಜಕೀಯ ಜನ್ಮ ನೀಡಿರುವ ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಬೆಲೆ
ಕಟ್ಟಲು ಸಾಧ್ಯವಿಲ್ಲ, ನನ್ನ ಆರೋಗ್ಯ ಸಮಸ್ಯೆ ಇದ್ದರೂ ಕೂಡ 70ರಿಂದ 80 ಗ್ರಾಮಗಳಿಗೆ ಭೇಟಿ ನೀಡುತ್ತಿರುವೆ. ಹೀಗಾಗಿ ಒಮ್ಮೆ ಪೂರ್ಣ ಪ್ರಮಾಣದ ಸರ್ಕಾರದ ರಚನೆಗೆ ಅವಕಾಶ ನೀಡಿದರೇ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತೇನೆಂದು ಹೇಳಿದರು.
ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿಲ್ಲ, ಶಿಕ್ಷಣ ಕ್ಷೇತ್ರವೊಂದರಲ್ಲಿ ಸುಮಾರು 57 ರಷ್ಟು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಹುದ್ದೆ ಖಾಲಿ ಇವೆ. ಎಚ್.ಡಿ.ದೇವೇಗೌಡರ ಅವಧಿಯಲ್ಲಿ 1 ಲಕ್ಷ ಹುದ್ದೆ, 2006ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 56 ಸಾವಿರ ಶಿಕ್ಷಕರ ಭರ್ತಿ ಮಾಡಿದ್ದೇನೆ, ಗುಣಾತ್ಮಾಕ ಶಿಕ್ಷಣ ಕೊಡಿಸಬೇಕೆಂದು ಪೋಷಕರು ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಿದರೇ ಒಂದು ಲಕ್ಷ ಬೇಕು, ಇಂತ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರತಿ ಪಂಚಾಯತಿ ಒಂದು ಉತ್ತಮ ಶಾಲೆ, ಶಿಕ್ಷಕರ ನೇಮಕ. ಬಡವರಿಗೆ ಶ್ರೀಮಂತರಿಗೆ ಸಮಾನ ವಿಧ್ಯಾಭ್ಯಾಸ ನೀಡಲಾಗುವುದು, 30 ಬೆಡ್ನ ಸುಸರ್ಜಿತ ಆಸ್ಪತ್ರೆಯೊಂದಿಗೆ ತಲಾ ಮೂರು ವೈದ್ಯರು ಮತ್ತು ನರ್ಸ್ಗಳನ್ನು ನೇಮಕ ಮಾಡಲಾಗುವುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!