ʼಭಯೋತ್ಪಾದಕರು ಪ್ರಚಾರ, ಪಿತೂರಿ ಸಿದ್ಧಾಂತಗಳನ್ನು ಹರಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದ್ದಾರೆʼ: ಭದ್ರತಾ ಮಂಡಳಿ ಸಭೆಯಲ್ಲಿ ಜೈ ಶಂಕರ್‌ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ಭಯೋತ್ಪಾದಕರ ಟೂಲ್ ಕಿಟ್‌ನಲ್ಲಿ ಪ್ರಬಲ ಸಾಧನಗಳಾಗಿ ಮಾರ್ಪಟ್ಟಿವೆ. ಎನ್‌ಕ್ರಿಪ್ಟ್‌ ಮಾಡಲಾದ ಸಂದೇಶ ಸೇವೆಗಳಂಥವುಗಳು ಭಯೋತ್ಪಾದಕರ ಕೈಯಲ್ಲಿ ದುರ್ಬಳಕೆಯಾಗುತ್ತಿವೆ. ಆರ್ಥಿಕ ಮತ್ತು ಸಾಮಾಜಿಕ ಪ್ರಯೋಜನಗಳಿಗೆಂದು ನಿರ್ಮಿಸಿದ ತಂತ್ರಜ್ಞಾನವು ಭಾಯೋತ್ಪಾದನೆಗೂ ಬಳಕೆಯಾಗುತ್ತಿದೆ ಎಂದು ವಿದೇಶಾಂಗ ಸಚಿವ ಎಸ್.‌ ಜೈಶಂಕರ್‌ ಹೇಳಿದ್ದಾರೆ.

ದೆಹಲಿಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿಯ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡಿದ ಜೈಶಂಕರ್, ಇತ್ತೀಚಿನ ವರ್ಷಗಳಲ್ಲಿ ಉದಾರವಾದಿ ಸಮಾಜಗಳಲ್ಲಿನ ಭಯೋತ್ಪಾದಕ ಗುಂಪುಗಳು ಮತ್ತು ಒಬ್ಬಂಟಿ (ಲೋನ್‌ ವೂಲ್ಫ್) ದಾಳಿಕೋರರು ತಂತ್ರಜ್ಞಾನಗಳನ್ನು ಗಮನಾರ್ಹವಾಗಿ ಅವಲಂಬಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

“ಸಾಮಾಜಿಕ ಮಾಧ್ಯ,ಮಗಳು ಭಯೋತ್ಪಾದಕರು ಮತ್ತು ಉಗ್ರಗಾಮಿ ಗುಂಪುಗಳ ಟೂಲ್ ಕಿಟ್‌ನಲ್ಲಿ ಪ್ರಚಾರ, ಮೂಲಭೂತ ಸಿದ್ಧಾಂತ ಮತ್ತು ಸಮಾಜಗಳನ್ನು ಅಸ್ಥಿರಗೊಳಿಸುವ ಗುರಿಯನ್ನು ಹೊಂದಿರುವ ಪಿತೂರಿ ಸಿದ್ಧಾಂತಗಳನ್ನು ಹರಡಲು ಪ್ರಬಲ ಸಾಧನಗಳಾಗಿ ಮಾರ್ಪಟ್ಟಿವೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ಹೇಳಿದ್ದಾರೆ.

“”ಈ ತಂತ್ರಜ್ಞಾನಗಳು ತಮ್ಮ ಸಂಭಾವ್ಯ ದುರ್ಬಲತೆಯಿಂದಾಗಿ ಹೊಸ ಸವಾಲುಗಳನ್ನು ಎಸೆದಿವೆ. ದೇಶ ವಿರೋಧಿಗ ಕೈಗೆ ಸಿಕ್ಕು ಇವುಗಳ ಸ್ವರೂಪವೇ ಬದಲಾಗಿ ದಾಳಿ ಮಾಡಲು ಸಹಾಯಕ ಸಾಧನಗಳಾಗಿ ಬದಲಾಗುವ ಆತಂಕ ಎದರುರಾಗಿದೆ. ತುಲನಾತ್ಮಕವಾಗಿ ಕಡಿಮೆ ವೆಚ್ಚದ ಆಯ್ಕೆಯಾಗಿರುವುದರಿಂದನ ಭಯೋತ್ಪಾದಕ ಗುಂಪುಗಳ ಸುಲಭವಾಗಿ ಪ್ರವೇಶಿಸುವಿಕೆ, ಶಸ್ತ್ರಾಸ್ತ್ರಗಳ ವಿತರಣೆ ಮತ್ತು ಉದ್ದೇಶಿತ ದಾಳಿಗಳಂತಹ ಕೆಟ್ಟ ಚಟುವಟಿಕೆಗಳಿಗೆ ಮಾನವರಹಿತ ವೈಮಾನಿಕ ವ್ಯವಸ್ಥೆಗಳ ದುರುಪಯೋಗವು ಸನ್ನಿಹಿತ ಅಪಾಯವಾಗಿದೆ” ಎಂದು ಅವರು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!