ಹೀಗೆ ಮಾಡಿ…ಮೊಡವೆಯ ಗೊಡವೆಯೇ ಇಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇ ತಿಂಗಳು ಆಗಮಿಸಿದೆ. ಬಿಸಿಲ ಝಳ ತೀವ್ರವಾಗಿ ಏರಿದೆ. ಪರಿಸರದಲ್ಲಿ ನೀರಿನಾಂಶ ಕಡಿಮೆಯಾಗುತ್ತಿದೆ. ಇದು ಮಾನವ ದೇಹಕ್ಕೂ ತೀವ್ರ ಸಮಸ್ಯೆ ತಂದೊಡ್ಡುತ್ತಿದೆ. ಪರಿಸರದಲ್ಲಿ ಧೂಳಿನಂಶ ಹೆಚ್ಚಾಗಿದೆ. ಇದೆಲ್ಲವೂ ಮಾನವನ ದೇಹದ ಚರ್ಮದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಬೇಸಗೆಯಲ್ಲಿ ಮುಖ ಹಾಗೂ ಚರ್ಮದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲೇ ಬೇಕು. ಹಾಗಾದರೆ ಚರ್ಮದ ರಕ್ಷಣೆ ಹೇಗೆ ಮಾಡಬೇಕು? ಇಲ್ಲಿದೆ ಒಂದಷ್ಟು ಟಿಪ್ಸ್..

ಬೇಸಿಗೆ ಕಾಲದಲ್ಲಿ ಬೆವರು ಹೆಚ್ಚಾಗಿರುತ್ತದೆ. ಇದರಿಂದಾಗಿ ಮುಖದಲ್ಲಿ ಮೊಡವೆಗಳ ಸಂಖ್ಯೆ ಹೆಚ್ಚು ಮೂಡುತ್ತದೆ. ಬೆವರಿನಿಂದ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾ ಚರ್ಮದ ಎಣ್ಣೆಯಂಶದೊಂದಿಗೆ ಬೆರೆತು ಮೊಡವೆ ರಂದ್ರಗಳನ್ನು ಸೃಷ್ಠಿಸಿ ಮೊಡವೆಯೇಳುವಂತೆ ಮಾಡುತ್ತದೆ. ಇದನ್ನು ತಡೆಗಟ್ಟಲು ಸಾಕಷ್ಟು ಬಾರಿ ಮುಖ ತೊಳೆಯುವುದು ಅನಿವಾರ್ಯ.
ಶುದ್ಧವಾದ ಕಡಲೆಹಿಟ್ಟಿನ ಪೇಸ್ಟ್ ತಯಾರಿಸಿ ಮುಖಕ್ಕೆ ಲೇಪಿಸಿ ತುಸುಕಾಲ ಬಿಟ್ಟು ತೊಳೆಯುವುದರಿಂದ ಮುಖದಲ್ಲಿರುವ ಜಿಡ್ಡಿನಂಶ ದೂರವಾಗಿ ಮೊಡವೆಯಾಗುವುದನ್ನು ತಡೆಯುತ್ತದೆ. ಮುಖದಲ್ಲಿರುವ ಕಪ್ಪು ಕಲೆಗಳು ಮಾಸಲೂ ಇದು ಸಹಕಾರಿ.
ಬಿಸಿಲಝಳಕ್ಕೆ ಉಂಟಾದ ಸನ್ ಬರ್ನ್ ತಡೆಯಲು ಶುದ್ಧ ಹಾಲಿನಿಂದ ತಯಾರಿಸಿದ ಮೊಸರು ಅಥವಾ ಹಾಲಿನ ಕೆನೆಯನ್ನು ಲೇಪಿಸಿ. ಅತಿಯಾದ ಬೆವರಿನಿಂದ ದೇಹದ ಸಂದಿಗಳಲ್ಲಿ ಉರಿಉಂಟಾಗುತ್ತಿರುತ್ತವೆ. ಸಾಬೂನಿನ ಬದಲಾಗಿ ಕಡಲೆಹಿಟ್ಟು ಬಳಸಿ ಸ್ನಾನ ಮಾಡುವುದರಿಂದ ಇದನ್ನು ಕಡಿಮೆಗೊಳಿಸಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!