ಆನ್ಲೈನ್‌ ದೋಖಾ: ಕೇಕ್‌ ಆರ್ಡರ್‌ ಮಾಡಿದ್ದಕ್ಕೆ ಖಾತೆಯಿಂದ ಕಟ್ಟಾಯ್ತು ಲಕ್ಷ ಲಕ್ಷ ಹಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೀವು ಯಾವುದೇ ವಸ್ತುವನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುತ್ತಿದ್ದೀರಾ? ಅಂತಾದರೆ ಆ ಬಗ್ಗೆ ಜಾಗೃತೆಯಾಗಿರುವುದು ಬಹಳ ಮುಖ್ಯ.  ಒಬ್ಬ ವ್ಯಕ್ತಿ ಆನ್ ಲೈನ್ ನಲ್ಲಿ ಕೇಕ್ ಆರ್ಡರ್ ಮಾಡಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾನೆ. ಪೊಲೀಸರ ಪ್ರಕಾರ, ವಾರಂಗಲ್ ನಗರದ 27 ನೇ ವಿಭಾಗದ ರಾಂಕಿ ವಿಲ್ಲಾಸ್ ನಿವಾಸಿ ಅಖಿಲ್ ತನ್ನ ಸ್ನೇಹಿತನ ಹುಟ್ಟುಹಬ್ಬದ ನಿಮಿತ್ತ ಶನಿವಾರ ಆನ್‌ಲೈನ್‌ನಲ್ಲಿ ಕೇಕ್ ಆರ್ಡರ್ ಮಾಡಿದ್ದಾರೆ.

ಆರ್ಡರ್‌ ಕನ್ಫರ್ಮ್‌ ಮಾಡಲು ಕರೆ ಮಾಡುತ್ತಿರುವುದಾಗಿ ತಿಳಿಸಿ ತಮ್ಮ ಮೊಬೈಲ್‌ ನಂಬರ್‌ಗೆ ಬಂದಿರುವ ಒನ್-ಟೈಮ್ ಪಾಸ್‌ವರ್ಡ್ ನೀಡುವಂತೆ ಕೇಳಿದ್ದಾರೆ. ನಂಬರ್ ಹೇಳಿದ ಕೂಡಲೇ ಅಖಿಲ್ ಬ್ಯಾಂಕ್ ಖಾತೆಯಿಂದ ಮತ್ತೊಂದು ಖಾತೆಗೆ ರೂ.60 ಸಾವಿರ ಹಣ ವರ್ಗಾವಣೆಯಾಗಿರುವ ಸಂದೇಶ ಬಂದಿದೆ. ಆಗ ಅನಿಲ್ ಅದೇ ನಂಬರ್ ಗೆ ಕರೆ ಮಾಡಿ ಖಾತೆಗೆ ದೊಡ್ಡ ಮೊತ್ತದ ಹಣ ವರ್ಗಾವಣೆಯಾಗಿದೆ ಎಂದು ತಿಳಿಸಿದ್ದಾರೆ.

ಕಂಪನಿಯ ಪ್ರತಿನಿಧಿ ಮತ್ತೊಮ್ಮೆ ಒಟಿಪಿ ಬರುತ್ತದೆ ಅದನ್ನು ಹೇಳಿದರೆ ವಾಪಸ್‌ ನಿಮ್ಮ ಖಾತೆಗೆ ಹಣ ಜಮಾ ಆಗಲಿದೆ ಎಂದು ಸೂಚಿಸಿ ಮತ್ತೊಮ್ಮೆ ಅವರು ಕೇಳಿದ ಒಟಿಪಿ ವಿವರ ತಿಳಿಸಿದರು. ತಕ್ಷಣ ಅನಿಲ್ ಖಾತೆಯಿಂದ ಮತ್ತೆ 60 ಸಾವಿರ ರೂ ವರ್ಗಾವಣೆಯಾಗಿದೆ. ಅಖಿಲ್  ತನಗೆ 1.20 ಲಕ್ಷ ರೂಪಾಯಿ ವಂಚನೆ ಮಾಡಿರುವುದನ್ನು ಕಂಡು ಮಿಲ್ಸ್ ಕಾಲೋನಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!